ಹುಬ್ಬಳ್ಳಿ: ವಿಶ್ವ ನೇತ್ರ ದಿನದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೌಂಡ್ ಟೇಬಲ್ ಹಾಗೂ ಹುಬ್ಬಳ್ಳಿ ಲೇಡಿಸ್ ಸರ್ಕಲ್ನಿಂದ ನಗರದ ಅಗರವಾಲ್ ಐ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ಉಚಿತ ನೇತ್ರ ತಪಾಸಣೆ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹುಬ್ಬಳ್ಳಿ ರೌಂಡ್ ಟೇಬಲ್ ಮುಖ್ಯಸ್ಥ ಹಿಮಾನ್ಷು ಕೊಠಾರಿ, ಕಣ್ಣು ಎಲ್ಲರಿಗೂ ಬಹಳ ಮುಖ್ಯ ಆದ್ದರಿಂದ ಎಲ್ಲರಿಗೂ ಅನುಕೂಲಕರವಾಗಲಿ ಎಂದು ಮೂರು ದಿನಗಳ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಅಗರವಾಲ್ ಐ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಚಿಕಿತ್ಸೆಗಾಗಿ ಡಿಸ್ಕೌಂಟ್ ಕೊಡಿಸಲಾಗಿದ್ದು, ಎಲ್ಲರೂ ಉಚಿತವಾಗಿ ಕಣ್ಣು ತಪಾಸಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ, ಆಸ್ಪತ್ರೆಯ ವೈದ್ಯ ಡಾ. ಶ್ರೀ ಕೃಷ್ಣ ನಾಡಗೌಡ, ಮಾನಿಷಿ ಕೊಠಾರಿ, ಪ್ರಮೋದ್ ಹುತಗಿಕಿರಿ, ಗೌರವ್ ಖುಲ್ಲರ್ ಇತರರು ಇದ್ದರು.