ETV Bharat / state

ಬ್ಯಾಂಕ್​ ಸಿಬ್ಬಂದಿ ಎಂದು ಫೋನ್​ ಮಾಡ್ದ ಖದೀಮ: ಹುಬ್ಬಳ್ಳಿಯಲ್ಲಿ ವೈದ್ಯೆಗೆ ಹಾಕಿದ ನಾಮ - ಹುಬ್ಬಳ್ಳಿಯಲ್ಲಿ ಬ್ಯಾಂಕ್​ ಸಿಬ್ಬಂದಿ ಎಂದು ವಂಚನೆ

ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿವೋರ್ವ, ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

Fraud in Hubli
ಹುಬ್ಬಳ್ಳಿಯಲ್ಲಿ ಬ್ಯಾಂಕ್​ ಸಿಬ್ಬಂದಿ ಎಂದು ಹೇಳಿ ಲಕ್ಷಾಂತರ ಹಣ ವರ್ಗಾವಣೆ
author img

By

Published : Dec 27, 2019, 9:18 AM IST

ಹುಬ್ಬಳ್ಳಿ: ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿವೋರ್ವ ನಗರದ ಖ್ಯಾತ ವೈದ್ಯರೊಬ್ಬರ ಪತ್ನಿಯ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್​ಗೆ ಕರೆ ಮಾಡಿ ತಾನು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ, ಬ್ಯಾಂಕ್ ಕೆವೈಸಿ ಅಪಡೇಟ್ ಮಾಡಬೇಕೆಂದು ನಂಬಿಸಿದ್ದಾನೆ. ಬಳಿಕ ಮೊಬೈಲ್‌ಗೆ ಬಂದಿರುವ ಓಟಿಪಿ ನಂಬರ್ ಪಡೆದುಕೊಂಡು, 7 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ವೈದ್ಯರ ಹಾಗೂ ಅವರ ಪತ್ನಿಯ ಜಂಟಿ ಖಾತೆಯಿಂದ ಹಣ ಕಡಿತಗೊಂಡ ನಂತರ, ಮೊಬೈಲ್ ಫೋನ್‌ಗೆ ಸಂದೇಶ ಬಂದಿದೆ. ಈ ಸಂದರ್ಭದಲ್ಲಿ ಮೋಸ ಹೋಗಿರುವುದು ತಿಳಿದಿದ್ದು, ಈ ಕುರಿತು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sample description

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.