ETV Bharat / state

ಮಾಜಿ‌ ಸಚಿವ ವಿನಯ್​ ಜನ್ಮದಿನದ ಸಭೆಯಲ್ಲಿ ಆಡಿಸಿ ನೋಡು ಹಾಡು ಹಾಡಿದ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ - Former Minister Vinay Kulkarni birthday

ಧಾರವಾಡದ‌ ಮುರುಘಾ ಮಠದಲ್ಲಿ‌ ಇಂದು ಸರ್ವ ಸಮಾಜದ ಸ್ವಾಭಿಮಾನಿ ವೇದಿಕೆ ವತಿಯಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಜನ್ಮ ದಿನಾಚರಣೆಯನ್ನು ಆಚರಿಸಲಾಗಿದೆ.

Anil Kumar
ಅನೀಲ್​ ಕುಮಾರ್​
author img

By

Published : Nov 7, 2020, 8:21 PM IST

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಜನ್ಮದಿನ ಸಭೆಯಲ್ಲಿ ಡಾ.ರಾಜ್ ‌ಕುಮಾರ್ ಗೀತೆ ಹಾಡುವ ಮೂಲಕ ಬಿಜೆಪಿ ವಿರುದ್ಧ ಅನಿಲ್ ಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

"ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.. ಯಾರೇ ಬರಲಿ ಯಾರೇ ಹೋಗಲಿ ವಿನಯ ನಗುತಲಿರುವುದು.." ಎಂದು ಧಾರವಾಡ ಗ್ರಾಮೀಣ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲ್‌ ಕುಮಾರ್ ಪಾಟೀಲ್ ಹಾಡು ಹಾಡಿದ್ದಾರೆ. ಧಾರವಾಡದ‌ ಮುರುಘಾ ಮಠದಲ್ಲಿ‌ ನಡೆದ ಸರ್ವ ಸಮಾಜದ ಸ್ವಾಭಿಮಾನಿ ವೇದಿಕೆ ವತಿಯಿಂದ ಜನ್ಮದಿನದ ಸಭೆಯಲ್ಲಿ ಮಾತನಾಡುತ್ತಾ ಹಾಡು ಹಾಡಿ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲ್ ಕುಮಾರ ಪಾಟೀಲ್

ವಿನಯ್ ಕುಲಕರ್ಣಿ ಹೊರಬಂದ ಬಳಿಕ ಈಗಿನ 10ರಷ್ಟು ಶಕ್ತಿಶಾಲಿಯಾಗ್ತಾರೆ. ಚೆಂಡು ನೆಲಕ್ಕೆ ಜೋರಾಗಿ ಪುಟಿದಷ್ಟು ಮೇಲೆ ಏಳುತ್ತದೆ.‌ ಇದಕ್ಕೆ ಉತ್ತಮ ಉದಾಹರಣೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದೇ ರೀತಿ ವಿನಯ್ ಕುಲಕರ್ಣಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಾರೆ ಎಂದರು.

ಇದೇ ವೇಳೆ ವಿನಯ್​ ಕುಲಕರ್ಣಿ ಸಂಬಂಧಿ ವಿಜಯಲಕ್ಷ್ಮಿ ಪಾಟೀಲ್ ನನ್ನ ಸೋದರನ ಜನ್ಮದಿನ ಆಚರಿಸುತ್ತಿರುವ ನಿಮಗೆಲ್ಲ ಧನ್ಯವಾದ ಎನ್ನುತ್ತ ಭಾವುಕರಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.