ಧಾರವಾಡ: ಜಾರ್ಜ್‌ಶೀಟ್‌ನಲ್ಲಿ ಹೆಸರು ಸೇರಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟು ಲಂಚ ಪಡೆಯುತ್ತಿದ್ದಾಗ ಅರಣ್ಯ ರಕ್ಷಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ರಘು ಕುರಿ ಎಂಬ ಅರಣ್ಯ ರಕ್ಷಕ ಎಸಿಬಿಗೆ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು.
ರುದ್ರಪ್ಪ ಶೀಗಿಹಳ್ಳಿ ಎಂಬುವರಿಂದ ರಘು 60 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊನ್ನಾಪುರ ಗ್ರಾಮದ ರುದ್ರಪ್ಪ ಶೀಗಿಹಳ್ಳಿ ಎಂಬಾತ ಕಟ್ಟಿಗೆ ಕಳ್ಳತನದಲ್ಲಿ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ರುದ್ರಪ್ಪನ ಅಳಿಯನ ಹೆಸರು ಸೇರಿಸುದಾಗಿ ರಘು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಹೆಸರು ಸೇರಿಸದಿರಲು 80 ಸಾವಿರ ರೂ.ಗೆ ಬೇಡಿಕೆಯಿಟ್ಟು ಅದರಲ್ಲಿ 60 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಳ್ನಾವರ ರಸ್ತೆಯ ಟೋಲ್ ಬಳಿ ಅರಣ್ಯ ರಕ್ಷಕ ರಘು ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: ಕಲಬುರಗಿ ಭೂಕಂಪನದ ಬಗ್ಗೆ ವರದಿ ನೀಡಲು ಸಿಎಂ ಸೂಚನೆ