ETV Bharat / state

ಕೆರೆಗಳು ಕೋಡಿ ಬಿದ್ದು, ಮೀನುಗಳು ಕೊಚ್ಚಿ ಹೋದವು..: ಮೀನುಗಾರರ ಗೋಳು ಕೇಳೋರ್ಯಾರು? - ಧಾರವಾಡದಲ್ಲಿ ಕೇಳೋರಿಲ್ಲ ಮೀನುಗಾರರ ಗೋಳು

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದಿದ್ದು, ಮೀನುಗಾರರು ಬಿಟ್ಟಿದ್ದ ಮೀನುಗಳೆಲ್ಲ ಕೊಚ್ಚಿ ಹೋಗಿವೆ. ಸರ್ಕಾರ ಪರಿಹಾರ ನೀಡಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

fisherman
ಮೀನುಗಾರರು
author img

By

Published : Aug 3, 2021, 9:46 AM IST

ಧಾರವಾಡ: ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ರೈತರ ಜತೆಗೆ ಮೀನುಗಾರರು ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮೀನುಗಾರಿಕೆಯನ್ನೇ ಅವಲಂಬಿಸಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಸುರಿದ ಭಾರೀ ವರ್ಷಧಾರೆ ಅವರ ಬದುಕನ್ನು ಬೀದಿಗೆ ತಂದಿದೆ.

ಮೀನುಗಾರಿಕಾ ಇಲಾಖೆಯಿಂದ ಅನುಮತಿ ಪಡೆದಿರುವ ಮೀನುಗಾರರು, ಜಿಲ್ಲೆಯ 128 ಕೆರೆಗಳಲ್ಲಿ ಒಳನಾಡು ಮೀನುಗಾರಿಕೆ ಮಾಡುತ್ತಿದ್ದಾರೆ. ಮೀನುಗಾರರ ಜತೆಗೆ ಸಂಘಗಳು ಕೂಡಾ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿವೆ. ಪ್ರತಿವರ್ಷದಂತೆ ಈ ವರ್ಷವೂ 8 ಲಕ್ಷದಷ್ಟು ಮೀನುಮರಿಗಳನ್ನು ಕೆರೆಗಳಿಗೆ ಬಿಡಲಾಗಿತ್ತು. ಮೀನುಮರಿಗಳನ್ನು ಕೆರೆಗೆ ಬಿಟ್ಟ ಮರುದಿನವೇ ಮಳೆ ಸುರಿದಿದ್ದರಿಂದ ಮರಿಗಳೆಲ್ಲ ಕೊಚ್ಚಿಹೋಗಿವೆ.

ಇದನ್ನೂ ಓದಿ: ಗೋಮಾಳ ರಕ್ಷಿಸುವಂತೆ ಫೇಸ್​​ಬುಕ್​​ನಲ್ಲಿ ಯುವಕನ ಮನವಿ: ಜಿಲ್ಲಾಧಿಕಾರಿಯಿಂದ ಸ್ಪಂದನೆ

ಮುಗದ ಕೆರೆಯ ಮೀನುಗಾರರು ಇಲಾಖೆ ಸಹಯೋಗದೊಂದಿಗೆ ಕೆರೆಗೆ ಮೀನುಗಳನ್ನು ಬಿಟ್ಟಿದ್ದರು. ಆದ್ರೆ, ಮರುದಿನವೇ ಕೆರೆ ಕೋಡಿ ಬಿದ್ದಿದೆ. ಪರಿಣಾಮ, ಮೀನುಗಳು ಕೊಚ್ಚಿ ಹೋಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಮಾ ಸೌಲಭ್ಯ ಒದಗಿಸಿಕೊಡಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.