ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಮಾರ್ಚ್ 2020ರಿಂದ ಸೆಪ್ಟೆಂಬರ್ 2020ರವರೆಗೂ ಎಮ್ವಿ ಕಾಯ್ದೆ ಅಡಿಯಲ್ಲಿ ಒಟ್ಟು 50,773 ಪ್ರಕರಣ ದಾಖಲಿಸಿದ್ದು, ಸ್ಥಳದಲ್ಲೇ 2,59,71,750 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ಲಾಕ್ಡೌನ್ ಮೇಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ಈ ಹಣ ಸಂಗ್ರಹವಾಗಿದೆ.
ನ್ಯಾಯಾಲಯದಲ್ಲಿ 9,09,200 ರೂಪಾಯಿ ವಸೂಲಿ ಮಾಡಿದ್ದು ಒಟ್ಟು 2 ಕೋಟಿ 68 ಲಕ್ಷ 80 ಸಾವಿರದ ಒಂಬೈನೂರ ಐವತ್ತು ರೂಪಾಯಿ ದಂಡ ವಸೂಲಿ ಮಾಡಲಾಗಿದೆ.