ETV Bharat / state

6 ತಿಂಗಳಿಂದ ಥಿಯೇಟರ್​ಗಳು ಬಂದ್... ಸಾಲ ಮಾಡಿ ವೇತನ ನೀಡುತ್ತಿರುವ ಮಾಲೀಕರು - Theater Owners Association

ಕೊರೊನಾದಿಂದಾಗಿ ಚಿತ್ರಮಂದಿರವನ್ನು ಸರ್ಕಾರ ಸಂಪೂರ್ಣ ಬಂದ್ ಮಾಡಿದೆ. ಇದೀಗ ಚಿತ್ರಮಂದಿರಗಳು ಬಂದ್ ಆಗಿ ಬರೋಬ್ಬರಿ 6 ತಿಂಗಳು ಕಳೆಯುತ್ತಾ ಬಂದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ ಈಗಲಾದರೂ ಚಿತ್ರಮಂದಿರ ಆರಂಭಕ್ಕೆ ಸರ್ಕಾರ ಮುಂದಾಗಬೇಕು ಎಂಬುದು ಮಾಲೀಕರ ಹಾಗೂ ಕಾರ್ಮಿಕರ ಒತ್ತಾಯವಾಗಿದೆ.

Film Theaters  effected  from corona past 6 months
6 ತಿಂಗಳಿನಿಂದ ತೆರೆಯದ ಚಿತ್ರಮಂದಿರ: ಸಾಲ ಮಾಡಿ ವೇತನ ನೀಡುತ್ತಿರುವ ಮಾಲಿಕರು
author img

By

Published : Sep 16, 2020, 6:48 PM IST

ಹುಬ್ಬಳ್ಳಿ: ಲಾಕ್​ಡೌನ್​​ ಅವಧಿಯಲ್ಲಿ ದೇಶದಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ನಷ್ಟಕ್ಕೆ ಸಿಲುಕಿವೆ. ಅದರಂತೆ ಮನೋರಂಜನಾ ತಾಣವಾದ ಚಿತ್ರಮಂದಿರಕ್ಕೆ ಕೊರೊನಾ ಬಹುದೊಡ್ಡ ಹೊಡೆತ ಕೊಟ್ಟಿದೆ. ಪರಿಣಾಮ ಚಿತ್ರಮಂದಿರ ನಂಬಿ ಜೀವನ ನಡೆಸುತ್ತಿದ್ದ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ಕೊರೊನಾದಿಂದಾಗಿ ಚಿತ್ರಮಂದಿರವನ್ನು ಸರ್ಕಾರ ಸಂಪೂರ್ಣ ಬಂದ್ ಮಾಡಿದೆ. ಇದೀಗ ಚಿತ್ರಮಂದಿರಗಳು ಬಂದ್ ಆಗಿ ಬರೋಬ್ಬರಿ 6 ತಿಂಗಳು ಕಳೆಯುತ್ತಾ ಬಂದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅದರಂತೆ ಹುಬ್ಬಳ್ಳಿ-ಧಾರವಾಡದಲ್ಲಿರುವ ಬಹುತೇಕ ಚಿತ್ರಮಂದಿರದ ಮಾಲೀಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಬೇರೆ ವಲಯಗಳಿಗೆ ಅನುಮತಿ ನೀಡಿದಂತೆ ಚಿತ್ರಮಂದಿರಗಳಿಗೆ ಅನುಮತಿ ನೀಡಬೇಕೆಂದು ಚಿತ್ರಮಂದಿರಗಳ ಮಾಲೀಕರು ಮನವಿ ಮಾಡಿದ್ದಾರೆ.‌‌‌

6 ತಿಂಗಳಿನಿಂದ ತೆರೆಯದ ಚಿತ್ರಮಂದಿರ: ಸಾಲ ಮಾಡಿ ವೇತನ ನೀಡುತ್ತಿರುವ ಮಾಲಿಕರು

ಇನ್ನೂ ಕೇಂದ್ರ ಸರ್ಕಾರ ಲಾಕ್​​​​ಡೌನ್‌ 4.0 ತೆರವಿನ ಹೆಸರಲ್ಲಿ ಹಲವಾರು ಕ್ಷೇತ್ರಗಳಿಗೆ ಅನುಮತಿ ನೀಡಿದ್ದು, ಅದರಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ವಿವಿಧ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ. ಅದೇ‌ ರೀತಿ ಚಿತ್ರಮಂದಿರ ಸಹ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು. ಕೊರೊನಾದಿಂದ ಕನ್ನಡ ಚಿತ್ರರಂಗ ಹಾಗೂ ಪೋಸ್ಟರ್ ಮ್ಯಾನ್, ನಟ ನಟಿಯರು, ಸಿನಿಮಾ ಹಂಚಿಕೆದಾರರಿಗೂ ಸಹ ಹೊಡೆತ ಬಿದ್ದಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಚಿತ್ರಮಂದಿರಗಳನ್ನು ಆರಂಭ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.