ಹುಬ್ಬಳ್ಳಿ: ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೊಂಡ ನಂತರ ಸಂಚಾರ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಟ್ರಾಫಿಕ ಪೊಲೀಸರು ಜಡಿಯುತ್ತಿರುವ ಭಾರಿ ದಂಡಕ್ಕೆ ಹೆದರಿ ಹೆಲ್ಮೆಟ್ಗಳ ಮೊರೆ ಹೋಗುತ್ತಿದ್ದಾರೆ.
ಇದರಿಂದಾಗಿ ಮಾರುಕಟ್ಟೆಯಲ್ಲಿ ಹೆಲ್ಮೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ವಾರದಿಂದ ಹೆಲ್ಮೆಟ್ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ನಗರದ ಕೊಪ್ಪಿಕರ ರಸ್ತೆ, ದುರ್ಗದ ಬಯಲು, ಗೋಕುಲ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಮುಂತಾದ ಕಡೆಗಳಲ್ಲಿನ ಹೆಲ್ಮೆಟ್ ಶೋರೂಂಗಳು ಜನರಿಂದ ತುಂಬಿ ತುಳುಕುತ್ತಿವೆ.
ಈ ಮೊದಲು ದಿನಕ್ಕೆ 10 ರಿಂದ 20 ಹೆಲ್ಮೆಟ್ಗಳು ಮಾರಾಟವಾಗುತ್ತಿದ್ದವು. ಆದರೆ ಇದೀಗ 50 ರಿಂದ 60 ಹೆಲ್ಮೆಟ್ಗಳು ಮಾರಾಟವಾಗುತ್ತಿದೆ ಅಂತಾರೆ ಅಂಗಡಿ ಮಾಲೀಕರು.