ETV Bharat / state

ಜಮೀನಿನ ರಸ್ತೆಗಾಗಿ ತಂದೆ-ಮಗನ ಬರ್ಬರ ಹತ್ಯೆ... ಬೆಚ್ಚಿಬಿದ್ದ ಕಲಘಟಗಿ - Murder

ಜಮೀನಿನ ರಸ್ತೆಗಾಗಿ ತಂದೆ ಮತ್ತು ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.‌ ಘಟನೆಗೆ ಹಳೆ ವೈಷಮ್ಯವೇ ಕಾರಣವೆಂದು ಶಂಕಿಸಲಾಗಿದೆ.

ತಂದೆ-ಮಗನ ಬರ್ಬರ ಹತ್ಯೆ
author img

By

Published : Sep 10, 2019, 1:13 PM IST

ಹುಬ್ಬಳ್ಳಿ: ಜಮೀನಿನ ರಸ್ತೆಗಾಗಿ ನಡೆದ ಕಲಹದಿಂದ ರಕ್ತದ ಕೋಡಿಯೇ ಹರಿದಿದೆ. ತಂದೆ ಮತ್ತು ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.‌

ವೀರಭದ್ರಪ್ಪ ಸತ್ತೂರು (48) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರ ಮಗ ರವಿ ಸತ್ತೂರ (20) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Hubli
ತಂದೆ-ಮಗನ ಬರ್ಬರ ಹತ್ಯೆ

ಕೊಲೆಗೀಡಾಗಿರುವ ವೀರಭದ್ರಪ್ಪ ಅವರು ದೇವಿಲಿಂಗನಕೊಪ್ಪ ಗ್ರಾಮ ಪಂಚಾಯತ್​ನ ಮಾಜಿ ಅಧ್ಯಕ್ಷ ಹಾಗೂ ಕಲಘಟಗಿ ಪಿಎಲ್​​ಡಿ ಬ್ಯಾಂಕ್​ನ ಸದಸ್ಯರಾಗಿದ್ದರು. ಆದರೆ ಈ ಹಿಂದೆ ಇದೇ ಗ್ರಾಮದ ಅಕ್ಕಿ ಕುಟುಂಬ ಹಾಗೂ ಸತ್ತೂರು ಕುಟುಂಬದ ನಡುವೆ ಆಸ್ತಿ ಹಾಗೂ ರಾಜಕೀಯ ವಿಷಯದಲ್ಲಿ ವೈಷಮ್ಯ ಉಂಟಾಗಿದ್ದು, ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಕಲಘಟಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಹುಬ್ಬಳ್ಳಿ-02

ಜಮೀನಿನ ರಸ್ತೆಗಾಗಿ ತಂದೆ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.‌
ವೀರಭದ್ರಪ್ಪ ಸತ್ತೂರು (48) ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ ಗಂಭೀರವಾಗಿ ಗಾಯಗೊಂಡಿದ್ದ ಮಗ ರವಿ ಸತ್ತೂರ (20) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ವೀರಭದ್ರಪ್ಪ ದೇವಿಲಿಂಗನಕೊಪ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕಲಘಟಗಿ ಪಿ ಎಲ್ ಡಿ ಬ್ಯಾಂಕ್ ಸದಸ್ಯರಾಗಿದ್ದಾರೆ.
ಗ್ರಾಮದ ಅಕ್ಕಿ ಕುಟುಂಬ ಹಾಗೂ ಸತ್ತೂರು ಕುಟುಂಬ ನಡುವೆ ವೈಷಮ್ಯವಿತ್ತು.
ಈ ಎರಡೂ ಕುಟುಂಬದ ನಡುವೆ ಆಸ್ತಿ ಹಾಗೂ ರಾಜಕೀಯ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಕಲಘಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.‌Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.