ಧಾರವಾಡ: ಕಬ್ಬಿಗೆ ಎಫ್ ಆರ್ ಪಿ ಹೆಚ್ಚಳಕ್ಕಾಗಿ ಆಗ್ರಹಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಮುಧೋಳದಲ್ಲಿ ರೈತರ ಮತ್ತು ಖಾಸಗಿ ಕಾರ್ಖಾನೆ ಅವರ ಮಧ್ಯದಲ್ಲಿ ಎಫ್ಆರ್ಪಿಗಿಂತ ಹೆಚ್ಚು ಬೆಲೆ ಕೊಡಬೇಕು ಎಂದು ಬೇಡಿಕೆ ಇದೆ. ಎಫ್ಆರ್‌ಪಿ ಈಗಾಗಲೇ ನಿಗದಿಯಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಸಕ್ಕರೆ ಕಾರ್ಖಾನೆಗಳು ಆರಂಭವಾಗಿವೆ. ಹಾಗೆ ಸಕ್ಕರೆ ನುರಿಸುವ ಕಾರ್ಯ ಆರಂಭವಾಗಿದೆ. ಹಿರಿಯ ಸಚಿವ ಗೋವಿಂದ ಕಾರಜೋಳ ಅವರು ಎರಡು ದಿನದಲ್ಲಿ ಸಿಎಂ ಜೊತೆ ಮಾತನಾಡುವ ಮಾತನ್ನು ಹೇಳಿದ್ದಾರೆ. ಈ ಹಿಂದೆ ದುಡ್ಡು ಕೊಟ್ಟಿಲ್ಲ ಎಂದು ಹೋರಾಟ ಆಗುತ್ತಿದ್ದವು. ಆದರೆ, ಇಡೀ ದೇಶದಲ್ಲಿ ನಮ್ಮ ರಾಜ್ಯ ಎಫ್ ಆರ್ ಪಿಯ 19,634ಕೋಟಿ ರೂಪಾಯಿಯನ್ನು 88 ಲಕ್ಷ ರೈತರಿಗೆ ಜಮಾ ಮಾಡಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಸಿಎಂ ರಾಜ್ಯದ ರೈತರ ಜೊತೆ ಸದಾ ಇರುತ್ತಾರೆ: ಹಿಂದಿನ ಯಾವುದೇ ಬ್ಯಾಲೆನ್ಸ್ ಉಳಿಸಿಲ್ಲ, ಎಫ್ ಆರ್ ಪಿಗಿಂತ ಹೆಚ್ಚು ಬೆಲೆ ಕೊಡಬೇಕು ಎಂದು ರೈತರು ಹೇಳಿದ್ದಾರೆ. ಅದಕ್ಕೆ ಸಿಎಂ ಕೂಡಾ ಕೆಲ ಸಲಹೆ ಕೊಟ್ಟಿದ್ದಾರೆ, ಸಕ್ಕರೆಯ ಉಪ ಉತ್ಪಾದನೆ ಮಾಡುವ ಇಥೆನಾಲ್, ಸ್ಪಿರಿಟ್ ಸೇರಿ ಹಲವು ಇವೆ ಇದಕ್ಕೆ ಒಂದು ಕಮಿಟಿ ಮಾಡಿದ್ದೇವೆ. ಅದರ ವರದಿ 10 ದಿನದಲ್ಲಿ ಬರಲಿದೆ, ಅದು ಬಂದ ಮೇಲೆ ಸಿಎಂಗೆ ಅದನ್ನು ಕೊಡುತ್ತೇವೆ. ಕೆಲವು ಕಡೆ 2,800 ಬೆಲೆ ಇದೆ, ಕೆಲವು ಕಡೆ 2,900 ಇದೆ, ಇದು ಬಾಗಲಕೋಟೆಯಲ್ಲಿ ಮಾತ್ರ ಇರುವ ಸಮಸ್ಯೆ ಉಳಿದ ಕಡೆ ಸಕ್ಕರೆ ನುರಿಸುತ್ತಿವೆ. ಕಬ್ಬು ಬೆಳೆದ ರೈತರಿಗೆ ತೊಂದರೆ ಆಗಬಾರದು. ರೈತರ ಹಾಗೂ ಕಾರ್ಖಾನೆ ಮಧ್ಯದಲ್ಲಿ ಸಮಸ್ಯೆ ಆದಾಗ ಸರ್ಕಾರ ಬಂದು ಇತ್ಯರ್ಥ ಮಾಡುತ್ತದೆ. ಸಿಎಂ ರಾಜ್ಯದ ರೈತರ ಜೊತೆ ಸದಾ ಇರುತ್ತಾರೆ, ಆ ವಿಶ್ವಾಸವಿದೆ ಎಂದು ಹೇಳಿದರು.
ಹಾಗೆ ಮಾತನಾಡಿದ ಅವರು, ಕಾರ್ಖಾನೆಯವರು ತಮ್ಮ ಲಾಭದಲ್ಲಿ ಸ್ವಲ್ಪ ರೈತರಿಗೆ ಕೊಡಬೇಕು ಎಂದು ಬೇಡಿಕೆ ಇದೆ, ವರದಿ ಬಂದ ಮೇಲೆ ಒಳ್ಳೆಯ ಸುದ್ದಿ ಕೊಡುತ್ತೇವೆ ಎಂದು ಭರವಸೆ ನೀಡಿದರು. ರೈತರು ಪ್ರತಿಭಟನೆ ಮಾಡಲು ಹೋಗಬಾರದು, ಇದರಿಂದ ರೈತರಿಗೆ ಹಾಗೂ ಕಾರ್ಖಾನೆಯವರಿಗೆ ತೊಂದರೆ ಆಗಲಿದೆ. ಕೆಲ ಕಾರ್ಖಾನೆಯವರು ರೈತರ ಜೊತೆ ಸಂಧಾನ ಮಾಡಿಕೊಂಡು ಹೆಚ್ಚು ಹಣ ಕೂಡ ಕೊಡುತ್ತಿದ್ದಾರೆ. ರೈತರಿಗೆ ವಿನಂತಿ ಮಾಡುತ್ತೇನೆ. ಕಬ್ಬನ್ನು ದಾಸ್ತಾನಿನಲ್ಲೇ ಇಡಬೇಡಿ, ಅದನ್ನು ಕಾರ್ಖಾನೆಗೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಿ, ಈ ವರ್ಷ ನಿಗದಿತ ಬೆಲೆಗಿಂತ 150 ರೂಪಾಯಿ ಸರ್ಕಾರ ಹೆಚ್ಚು ಮಾಡಿದೆ. ಇದೇ ತರ ಪ್ರತಿ ವರ್ಷ ಬೆಲೆ ಹೆಚ್ಚಳ ಆಗಲಿದೆ. ರೈತರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು ಎಂದರು.
ಇದನ್ನೂ ಓದಿ: ಮೈಸೂರು ಬಸ್ ಶೆಲ್ಟರ್ ಬಣ್ಣ ಬದಲು.. ವಿದ್ಯಾರ್ಥಿಗಳಿಗೆ ಅನುಕೂಲವಾದ್ರೆ ಸಾಕು ಎಂದ ಸ್ಥಳೀಯರು