ETV Bharat / state

ಕುಂದಗೋಳದ ಪಿಕೆಪಿಎಸ್ ನಲ್ಲಿ ರೈತರಿಗೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ - ಹುಬ್ಬಳ್ಳಿ ರೈತರ ಸಮಸ್ಯೆ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಸೊಸೈಟಿಯು ರೈತರಿಂದ ಶೇಂಗಾ ಖರೀದಿಸಿ ಅದಕ್ಕೆ ಹಣವನ್ನು ಪಾವತಿಸಿದೆ. ಆದ್ರೆ, ಶೇಂಗಾದ ಖಾಲಿ ಚೀಲ ಹಾಗೂ ಸಾಗಾಣಿಕೆ ವೆಚ್ಚ ಕೊಡದೆ ಮಹಾಮೋಸ ಮಾಡಿದೆ. ಒಟ್ಟು 15 ಲಕ್ಷಕ್ಕಿಂತ ಹೆಚ್ಚು ಹಣ ಬರಬೇಕಿದ್ದು, ಬಾಡಿಗೆ ಹಣವನ್ನು ಈವರೆಗೆ ಸಂದಾಯ ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಪಿಕೆಪಿಎಸ್ ನಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆಯ ಆರೋಪ
author img

By

Published : Nov 7, 2019, 8:11 PM IST

ಹುಬ್ಬಳ್ಳಿ: ಇತ್ತೀಚೆಗೆ ಸಂಭವಿಸಿದ್ದ ಭೀಕರ ಪ್ರವಾಹ ಹಾಗೂ ಭಾರಿ ಮಳೆಯಿಂದಾಗಿ ರೈತರು ಬೀದಿಗೆ ಬಿದ್ದಿದ್ದಾರೆ. ಇನ್ನು ಅವರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆ ಮಾರಾಟ ಮಾಡಿ ಜೀವನ ನಡೆಸಬೇಕಿದ್ರೆ ಅದಕ್ಕೂ ಕೆಲ ಅಧಿಕಾರಿಗಳು, ದಲ್ಲಾಳಿಗಳು ಕಲ್ಲು ಹಾಕುತ್ತಾರೆ. ಸದ್ಯ ಪಿಕೆಪಿಎಸ್ ಅಧಿಕಾರಿಗಳು ರೈತರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಕೆಪಿಎಸ್ ನಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಆರೋಪ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಸೊಸೈಟಿಯು ರೈತರಿಂದ ಶೇಂಗಾ ಖರೀದಿಸಿ ಅದಕ್ಕೆ ಹಣವನ್ನು ಪಾವತಿಸಿತ್ತು. ಆದ್ರೆ, ಶೇಂಗಾದ ಖಾಲಿ ಚೀಲ ಹಾಗೂ ಸಾಗಾಣಿಕೆ ವೆಚ್ಚ ಕೊಡದೆ ಮಹಾಮೋಸ ಮಾಡಿದೆ. ಒಟ್ಟು 15 ಲಕ್ಷಕ್ಕಿಂತ ಹೆಚ್ಚು ಹಣ ಬರಬೇಕಿದ್ದು, ಬಾಡಿಗೆ ಹಣವನ್ನು ಈವರೆಗೆ ಸಂದಾಯ ಮಾಡಿಲ್ಲ ಎಂದು ರೈತರು ದೂರಿದ್ದಾರೆ.

ಇನ್ನು, ಈ ಬಗ್ಗೆ ಸೊಸೈಟಿ ಅಧ್ಯಕ್ಷ ಸಹದೇವಪ್ಪ ಹೊಸಕಟ್ಟಿಯವರನ್ನ ಕೇಳಿದ್ರೆ, ಸೊಸೈಟಿ ಸದಸ್ಯರೆಲ್ಲರೂ ಚರ್ಚೆ ನಡೆಸಿ ಠರಾವು ಹೊರಡಿಸಲಾಗಿದ್ದು, ಅದರಲ್ಲಿ ಬಾಡಿಗೆ, ಖಾಲಿ ಚೀಲದ ಹಣವನ್ನು ಪೂರ್ಣವಾಗಿ ಸಂದಾಯ ಮಾಡಲಾಗುವುದಿಲ್ಲ. ಬದಲಾಗಿ 30 ರೂಪಾಯಿ ಹಣವನ್ನು ಮಾತ್ರ ಕೊಡಲಾಗುವುದು ಉಳಿದ ಹಣವನ್ನು ಸೊಸೈಟಿ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಹಾರಿಕೆ ಉತ್ತರ ಕೊಡುತ್ತಿದ್ದಾರಂತೆ. ಅಲ್ಲದೇ, ಈ ಬಗ್ಗೆ ಪ್ರಶ್ನಿಸಿದವರ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ ಅನ್ನೋದು ಅನ್ನದಾತರ ಆರೋಪವಾಗಿದೆ.

ರೈತರಿಗೆ ಅನ್ಯಾಯ ಮಾಡಿದ ಯಲಿವಾಳ ಸೊಸೈಟಿಯೂ ರೈತರಿಗೆ ಸಂದಾಯ ಮಾಡಬೇಕಾದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ, ಸೊಸೈಟಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಜಿಲ್ಲಾಡಳಿತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ರೈತರು ಎಚ್ಚರಿಕೆ ನೀಡಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಪಿಕೆಪಿಎಸ್ ನಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆಯ ಆರೋಪ...

ಹುಬ್ಬಳ್ಳಿ:-ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರೈತರ ಬದುಕು ಬೀದಿಗೆ ಬಂದಿದೆ. ಇನ್ನು ರೈತರು ಜಮೀನನಲ್ಲಿ ಬೆಳೆದ ಶೇಂಗಾ ಮಾರಾಟ ಮಾಡಿ ಜೀವನ ನಡೆಸಬೇಕಿದ್ರೆ ಅದಕ್ಕೆ ಪಿಕೆಪಿಎಸ್ ಅಧಿಕಾರಿಗಳು ಕಲ್ಲು ಹಾಕಿದ್ದಾರೆ. ಇನ್ನು ಪಿಕೆಪಿಎಸ್ ನಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ....

ನಾಪೆಡ್ 2017-18 ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿ.ಕೆ.ಪಿ.ಎಸ್) ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಸೊಸೈಟಿಯು ಶೇಂಗಾ ಖರೀದಿಸಿ ರೈತರಿಗೆ ಖಾಲಿ ಚೀಲ ಹಾಗೂ ಸಾಗಾಣಿಕೆ ವೆಚ್ಚ (ಬಾಡಗಿ) ರೈತರಿಗೆ ಕೊಡದೇ ಮಹಾಮೋಸ ಮಾಡಿದೆ. 21 ಜನವರಿ 2017-18ರಂದು 12209 ಚೀಲ ಶೇಂಗಾವನ್ನು ಯಲಿವಾಳ ಸೊಸೈಟಿಗೆ ಕೊಟ್ಟಿದ್ದು, ಪ್ರತಿ ಖಾಲಿಚೀಲಕ್ಕೆ 35 ರೂ, ಬಾಡಗೆ ಸೇರಿ ಒಟ್ಟು 50.50. ಒಂದು ಚೀಲಕ್ಕಂತೆ 6ಲಕ್ಷ ಹಾಗೂ 30603 ಚೀಲಕ್ಕೆ 51ರೂಪಾಯಿಯಂತೆ 15ಲಕ್ಷಕ್ಕಿಂತ ಹೆಚ್ಚು ನಗದು ಕೊಡಬೇಕು. ಆದ್ರೇ, ಶೇಂಗಾ ಹಣದ ಹಣವನ್ನು ಪಾವತಿಸಿ ಶೇಂಗಾದ ಖಾಲಿ ಚೀಲ ಹಾಗೂ ಬಾಡಗಿ ಹಣವನ್ನು ಈವರೆಗೆ ಸಂದಾಯ ಮಾಡಿಲ್ಲವಂತೇ ಎಂದು ರೈತರು ಆಕ್ರೋಶ ಹೋರಹಾಕಿದ್ದಾರೆ....

ಇನ್ನು ಈ ಬಗ್ಗೆ ಸೊಸೈಟಿ ಅಧ್ಯಕ್ಷ ಸಹದೇವಪ್ಪ ಹೊಸಕಟ್ಟಿ ಕೇಳಿದ್ರೇ ಅವರು ಸೊಸೈಟಿ ಸದಸ್ಯರೆಲ್ಲರೂ ಚರ್ಚೆ ನಡೆಸಿ ಠರಾವು ಹೊರಡಿಸಲಾಗಿದ್ದು, ಅದರಲ್ಲಿ ಬಾಡಗಿ, ಖಾಲಿ ಚೀಲದ ಹಣವನ್ನು ಪೂರ್ಣವಾಗಿ ಸಂದಾಯ ಮಾಡಲಾಗುವುದಿಲ್ಲ. ಬದಲಾಗಿ 30ರೂಪಾಯಿ ಹಣವನ್ನು ಮಾತ್ರ ಕೊಡಲಾಗುವುದು ಉಳಿದ ಹಣವನ್ನು ಸೊಸೈಟಿ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಹಾರಿಕೆ ಉತ್ತರ ಕೊಡುತ್ತಿದ್ದರಂತೇ.ಅಲ್ಲದೇ ಈ ಬಗ್ಗೆ ಕೇಳಲು ಹೋದರೆ ರೈತರ ಮೇಲೆಯೇ ದಬ್ಬಾಳಿಕೆ ಮಾಡಿ, ನಿಮ್ಮ ಶೇಂಗಾ ವ್ಯಾಪಾರ ಮಾಡಲು ಮೇಲಧಿಕಾರಿಗಳಿಗೆ ಲಕ್ಷಗಟ್ಟಲೇ ಹಣ ಕೊಟ್ಡಿದ್ದೇನೆಂದು ಸೊಸೈಟಿ ಅಧಿಕಾರಿಗಳು ಹೇಳುತ್ತಿದ್ದಾರೇ ಬಲವಾಗಿ ರೈತರು ಆರೋಪಿಸಿದ್ರು...

ಇನ್ನೂ ರೈತರಿಗೆ ಅನ್ಯಾಯ ಮಾಡಿದ ಯಲಿವಾಳ ಸೊಸೈಟಿಯೂ ರೈತರಿಗೆ ಸಂದಾಯ ಮಾಡಬೇಕಾದ ಖಾಲಿಚೀಲ ಹಾಗೂ ಸಾಗಾಣಿಕೆ ಬಾಡಿಗೆಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ ಸೊಸೈಟಿಯಲ್ಲಿ ನಡೆದ ಬ್ರಷ್ಟಾಚಾರ ಕುರಿತು ಜಿಲ್ಲಾಡಳಿತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ರೈತರು ಎಚ್ಚರಿಕೆ ಸಹ ನೀಡಿದ್ರು....!

1)ಲಿಂಗನಗೌಡ....
(ಶೇಂಗಾ ಚೀಲ ನೀಡಿದ ರೈತ

2)ಚೆನ್ನಬಸಪ್ಪ
(ಶೇಂಗಾ ಚೀಲ ನೀಡಿದ ರೈತ)ತಲೆ ಮೇಲ ಟೋಪಿ ಹಾಕಿದ್ದಾರೆ....

_____________________________

ಹುಬ್ಬಳ್ಳಿ: ಯಲ್ಲಪ್ ಕುಂದಗೋಳConclusion:ಯಲ್ಲಪ್‌ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.