ETV Bharat / state

ಅಕಾಲಿಕ ಮಳೆ‌,  ಬೆಲೆ ಕುಸಿತ: ತಾನೇ ಬೆಳೆದ ಬೆಳೆ ಕೈಯಾರೆ ನಾಶಪಡಿಸಿದ ರೈತ

author img

By

Published : Nov 3, 2022, 5:48 PM IST

ಅಕಾಲಿಕ ಮಳೆ ಮತ್ತು ಬೆಲೆ ಕುಸಿತದಿಂದ ಬೇಸತ್ತ ಹುಬ್ಬಳ್ಳಿಯ ರೈತರೊಬ್ಬರು ತಾವು ಬೆಳೆದ ಮೆಣಸಿನ ಕಾಯಿ ಬೆಳೆಯನ್ನು ನಾಶಪಡಿಸಿದ್ದಾರೆ.

farmer-destroys-his-own-crops-in-hubballi
ಅಕಾಲಿಕ ಮಳೆ‌ ಹಾಗೂ ಬೆಲೆ ಕುಸಿತ: ತಾನೇ ಬೆಳೆದ ಬೆಳೆಯನ್ನು ತನ್ನ ಕೈಯಾರೆ ನಾಶಪಡಿಸಿದ ರೈತ

ಹುಬ್ಬಳ್ಳಿ : ಅಕಾಲಿಕ ಮಳೆ‌ ಹಾಗೂ ಬೆಳೆಗೆ ಸರಿಯಾದ ಬೆಲೆ ಸಿಗದ ಹಿನ್ನಲೆ ರೈತರೊಬ್ಬರು ತಾವು ಬೆಳೆದ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.

ರೈತ ಜೈಪಾಲ ಯೋಗಪ್ಪನವರ ತಮ್ಮ ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಆದರೆ, ಅಕಾಲಿಕ ಮಳೆ ಪರಿಣಾಮ ನಿರೀಕ್ಷೆಗೆ ತಕ್ಕಂತೆ ಬೆಳೆ ಬಂದಿರಲಿಲ್ಲ. ಜೊತೆಗೆ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಟ್ರ್ಯಾಕ್ಟರ್​ ಮೂಲಕ ಬೆಳೆಯನ್ನು ನಾಶಪಡಿಸಿದ್ದಾರೆ.

ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು.‌ ನನಗೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂದು ರೈತ ಜೈಪಾಲ ಯೋಗಪ್ಪನವರ್​ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ : ಒಬ್ಬಿಬ್ಬರು ಓಡಾಡಿದ್ರೂ ತೂಗಾಡುತ್ತಿದೆ ಕಾಫಿನಾಡಿನ ತೂಗುಸೇತುವೆ.. ಅಪಾಯಕ್ಕೂ ಮುನ್ನ ಬೇಕಿದೆ ಕಾಯಕಲ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.