ಹುಬ್ಬಳ್ಳಿ : ಕ್ರಿಸ್‌ಮಸ್, ಹೊಸವರ್ಷ ಮತ್ತು ಮಕರ ಸಂಕ್ರಾಂತಿ ಅಂಗವಾಗಿ ನೈರುತ್ಯ ರೈಲ್ವೆ ಆರಂಭಿಸಿರುವ ವಿಶೇಷ ರೈಲುಗಳ ಸಂಚಾರವನ್ನು ಇನ್ನು ಕೆಲ ದಿನಗಳ ಕಾಲ ಮುಂದುವರಿಯಲಿದೆ.
ಹುಬ್ಬಳ್ಳಿ ಲೋಕಮಾನ್ಯ ತಿಲಕ್ ಟರ್ಮಿನಸ್ (ಜ.30), ಲೋಕಮಾನ್ಯ ತಿಲಕ್ ಟರ್ಮಿನಸ್–ಹುಬ್ಬಳ್ಳಿ (ಜ.31), ಧಾರವಾಡ–ಮೈಸೂರು ಎಕ್ಸ್‌ಪ್ರೆಸ್ (ಜ.15), ಮೈಸೂರು–ಧಾರವಾಡ ಎಕ್ಸ್‌ಪ್ರೆಸ್ (ಜ.16), ವಿಜಯವಾಡ-ಹುಬ್ಬಳ್ಳಿ (ಜ.19), ಹುಬ್ಬಳ್ಳಿ-ವಿಜಯವಾಡ (ಜ.20), ಹುಬ್ಬಳ್ಳಿ-ಸಿಕಂದರಾಬಾದ್ (ಜ.30), ಸಿಕಂದರಾಬಾದ್–-ಹುಬ್ಬಳ್ಳಿ (ಜ.31), ಕೆಎಸ್‌ಆರ್ ಬೆಂಗಳೂರು–-ಧಾರವಾಡ (ಜ.30), ಧಾರವಾಡ-–ಕೆಎಸ್‌ಆರ್ ಬೆಂಗಳೂರು (ಜ.31), ಧಾರವಾಡ-ಸೊಲ್ಲಾಪುರ (ಜ.15), ಸೊಲ್ಲಾಪುರ-ಧಾರವಾಡ (ಜ.16), ಹುಬ್ಬಳ್ಳಿ-ಸೊಲ್ಲಾಪುರ (ಜ.15), ಸೊಲ್ಲಾಪುರ-ಹುಬ್ಬಳ್ಳಿ (ಜ.16), ಹುಬ್ಬಳ್ಳಿ-ಬಳ್ಳಾರಿ (ಜ.15), ಬಳ್ಳಾರಿ-ಹುಬ್ಬಳ್ಳಿ (ಜ.16)ರವರೆಗೆ ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ.
ಓದಿ: ಅಧಿಕ ಆಸ್ತಿ ಹೊಂದಿರುವ ಆರೋಪ : ಮೈಸೂರಿನ ಎಸಿಎಫ್ ಮನೆ ಮೇಲೆ ಎಸಿಬಿ ದಾಳಿ
ಪ್ರತಿ ಶುಕ್ರವಾರ ಹುಬ್ಬಳ್ಳಿಯಿಂದ ವಾರಣಾಸಿಗೆ ತೆರಳುವ ರೈಲನ್ನು ಜ. 29ರವರೆಗೆ, ಪ್ರತಿ ಭಾನುವಾರ ವಾರಣಾಸಿಯಿಂದ ಹುಬ್ಬಳ್ಳಿಗೆ ಬರುವ ರೈಲನ್ನು 30ರವರೆಗೆ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.