ಹುಬ್ಬಳ್ಳಿ : ಲಾಕ್ಡೌನ್ ಅವಧಿಯಲ್ಲಿ ಬಸ್ಗಳ ಸಂಚಾರ ಸಂಪೂರ್ಣ ನಿಷೇಧಿಸಿದ್ದರಿಂದಾಗಿ, ಬಸ್ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿತ್ತು. ಈ ಅವಧಿಯ ನಷ್ಟವನ್ನು ಸರಿದೂಗಿಸಲು ಮಾರ್ಚ್ 22 ರಿಂದ ಮೇ 31 ರ ತಿಂಗಳ ಬಾಡಿಗೆ ಪಾವತಿಸಲು ವಿನಾಯಿತಿ ನೀಡಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಇರುವ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿರುವುದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ ಸದರಿ ಅಂಗಡಿಗಳ ಪರವಾನಗಿದಾರರಿಗೆ ಮತ್ತು ಜಾಹೀರಾತು ಪರವಾನಗಿದಾರರಿಗೆ ಸಂಸ್ಥೆಗೆ ತುಂಬಬೇಕಾದ ಮಾಸಿಕ ಪರವಾನಗಿ ಶುಲ್ಕ (ತಿಂಗಳ ಬಾಡಿಗೆ ಹಣ) ಪಾವತಿಸಲು ತೊಂದರೆಯಾಗಿರವುದನ್ನು ಪರಿಗಣಿಸಿ, ಹೆಚ್ಚುವರಿ 13 ದಿನಗಳ ಗಡುವು ನೀಡಲಾಗಿದೆ.
ಮಾನವೀಯತೆಯ ದೃಷ್ಟಿಯಿಂದ ಮಾರ್ಚ್ 22 ರಿಂದ ಮೇ 31ರ ವರೆಗಿನ ಅವಧಿಯ ಪರವಾನಗಿ ಶುಲ್ಕವನ್ನು ಪಾವತಿಸಲು 13 ದಿಗಳ ವಿನಾಯಿತಿ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.