ಹುಬ್ಬಳ್ಳಿ: ಗ್ಯಾಂಗ್ರಿನ್ದಿಂದ ಕಾಲು ಕಳೆದುಕೊಂಡು, ಕಣ್ಣು ಕಾಣದೇ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬನ ಕುರಿತು ಈಟಿವಿ ಭಾರತ್ ಸವಿಸ್ತಾರವಾಗಿ ಬಿತ್ತರಿಸಿದ್ದ ಸುದ್ದಿ ನೋಡಿದ ಅದೆಷ್ಟೋ ದಾನಿಗಳು ಆತನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿವೆ.
ಹೌದು.. ನಗರದ ಗುಡಿಹಾಳ ರೋಡ್ ಸಿಮ್ಲಾ ನಗರ ಏಳನೆ ಕ್ರಾಸ್ ನಿವಾಸಿ ವಸಂತ ಕುಲಕರ್ಣಿ ಎಂಬುವವರು, ಸುಮಾರು 12 ವರ್ಷಗಳಿಂದ ಗ್ಯಾಂಗ್ರಿನ್ ರೋಗದಿಂದ ಬಳಲುತ್ತಿದ್ದು, ದುಡಿಯಬೇಕೆಂದರೆ ಮೈಯಲ್ಲಿ ಶಕ್ತಿ ಕೂಡಾ ಇಲ್ಲ. ತಿನ್ನಲ್ಲು ಅನ್ನವು ಇಲ್ಲದೇ ಪರದಾಡುತಿದ್ದರು. ಇದನ್ನು ಕಂಡ ಈಟಿವಿ ಭಾರತ್ ನೊಂದ ಹಿರಿಯ ಜೀವಿಗಳಿಗೆ ಆಸರೆಯಾಗಬೇಕಿದೆ ದಾನಿಗಳು!! ಎಂಬ ಶೀರ್ಷಿಕೆ ಅಡಿ ವರದಿ ಬಿತ್ತರಿಸಿತ್ತು.
ವರದಿ ನೋಡಿದ ಹುಬ್ಬಳ್ಳಿ ಜನತೆ ಈ ನೊಂದ ಹಿರಿಯ ಜೀವಗಳಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿ, ಬದುಕಲು ದಾರಿ ಮಾಡಿಕೊಟ್ಟಿದ್ದು, ಈಗ ಆ ಕುಟುಂಬ ನಿರಾಳವಾಗಿ ಬದಕುತ್ತಿದೆ. ಇನ್ನೂ ಈಟಿವಿ ಭಾರತ್ ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದ್ದು, ಕುಟುಂಬಸ್ಥರು ಸಹ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೊನಾ ಎಂಬ ಮಹಾಮಾರಿ ಹೊಡೆತಕ್ಕೆ ಇಂತಹ ಅದೆಷ್ಟೋ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು, ಇವರಿಗೆ ಸಹಾಯ ಮಾಡಿದ ಹಾಗೇ ದಾನಿಗಳು' ಇನ್ನುಳಿದ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎನ್ನುವುದೇ ನಮ್ಮ ಅಭಿಲಾಷೆ. (ಹುಬ್ಬಳ್ಳಿ: ಬಹು ಅಂಗಾಂಗ ಕಾಯಿಲೆಗಳಿಂದ ನೊಂದ ಜೀವಗಳಿಗೆ ಆಸರೆಯಾಗಬೇಕಿದೆ ದಾನಿಗಳು)