ETV Bharat / state

ಧಾರವಾಡ ಡಿಸಿ ಕಚೇರಿಗೆ ನಾಮಪತ್ರವನ್ನೇ ಮರೆತು ಬಂದ ಅಭ್ಯರ್ಥಿ...

ರೈತ ಮುಖಂಡ ಮಲ್ಲಿಕಾರ್ಜುನ ಗೌಡ ಬಾಳನಗೌಡರ ನಾಮಪತ್ರವನ್ನು ಹೊರ ಬಿಟ್ಟು ಬಂದ ಅಭ್ಯರ್ಥಿ. ನಾಮಪತ್ರ ಸಲ್ಲಿಕೆಯ ಸಮಯ ಮುಗಿಯುವ ಹಂತದಲ್ಲೇ ಧಾರವಾಡದಲ್ಲಿ ಅಭ್ಯರ್ಥಿ ಯಡವಟ್ಟು

author img

By

Published : Apr 1, 2019, 5:46 PM IST

ಅಭ್ಯರ್ಥಿ

ಧಾರವಾಡ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿ ನಾಮಪತ್ರವನ್ನೇ ಹೊರಗೆ ಬಿಟ್ಟುಬಂದ ಸ್ವಾರಸ್ಯಕರ ಘಟನೆ ನಡೆಯಿತು.

ರೈತ ಮುಖಂಡ ಮಲ್ಲಿಕಾರ್ಜುನ ಗೌಡ ಬಾಳನಗೌಡರ ನಾಮಪತ್ರವನ್ನು ಹೊರಗೆ ಬಿಟ್ಟುಬಂದ ಅಭ್ಯರ್ಥಿ. ನಾಮಪತ್ರ ಸಲ್ಲಿಕೆಯ ಸಮಯ ಮುಗಿಯುವ ಹಂತದಲ್ಲೇ ಅಭ್ಯರ್ಥಿ ಯಡವಟ್ಟು ಮಾಡಿಕೊಂಡಿದ್ದಾರೆ.

ಕೊನೆಗೆ ಚುನಾವಣಾಧಿಕಾರಿ ನಾಮಪತ್ರ ಎಲ್ಲಿ ಅಂತಾ ಕೇಳಿದಾಗಲೇ ‌ಎಚ್ಚರಗೊಂಡ ಅಭ್ಯರ್ಥಿ ಮಲ್ಲಿಕಾರ್ಜುನಗೌಡ, ತಮ್ಮ ಬೆಂಬಲಿಗನನ್ನು ನಾಮಪತ್ರ ತರಲು ಕಳುಹಿಸಿದರು. ತಮಾಷೆ ಅಂದ್ರೆ ಬೆಂಬಲಿಗನೂ ಸಹ ನಾಮಪತ್ರ ತರುವಲ್ಲಿ ವಿಳಂಬ ಮಾಡಿದ್ದಾನೆ.

ನಾಮಪತ್ರ ಮರೆತು ಬಂದ ಅಭ್ಯರ್ಥಿ

ಕೊನೆಗೆ ಅಭ್ಯರ್ಥಿಯೇ ಹೊರಗೆ ಹೋಗಿ ನಾಮಪತ್ರ ತಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಅಪಾರ ಬೆಂಬಲಿಗರೊಂದಿಗೆ ಶಿವಾಜಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮೂಲಕ‌ ಬಂದ ಮಲ್ಲಿಕಾರ್ಜುನಗೌಡ ನಾಮಪತ್ರ ಸಲ್ಲಿಸಿದರು.

ಈ ಒಂದು ಸ್ವಾರಸ್ಯಕರ ಘಟನೆಯನ್ನು ಸೇರಿ ಇಂದು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಲ್ಕು ನಾಮಪತ್ರಗಳು ಸಲ್ಲಿಕೆಯಾದವು. ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿಯಾಗಿ ರೇವಣಸಿದ್ದಪ್ಪ ತಳವಾರ, ಜೆಡಿ(ಯು) ನ ಗುರಪ್ಪ ತೋಟದ, ಪಕ್ಷೇತರರಾಗಿ ಉದಯ ಅಂಬಿಗೇರ, ಮಲ್ಲಿಕಾರ್ಜುನಗೌಡ ಬಾಳನಗೌಡ್ರ ಇಂದು ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.