ಧಾರವಾಡ: ಆಹಾರವನ್ನರಸಿ ನಾಡಿಗೆ ಬಂದಿದ್ದ ಜಿಂಕೆಯೊಂದರ ಮೇಲೆ ಶ್ವಾನಗಳ ಗುಂಪು ದಾಳಿ ನಡೆಸಿದ್ದು, ಗಾಯಗೊಂಡ ವನ್ಯಜೀವಿಗೆ ಚಿಕಿತ್ಸೆ ನೀಡಲಾಗಿದೆ.
ಧಾರವಾಡ ಹೊರವಲಯ ಗಿರಿನಗರದ ಬಳಿ ಬಂದಿರುವ ಜಿಂಕೆಯೊಂದು ನಾಯಿಗಳ ದಾಳಿಗೆ ಒಳಗಾಗಿದೆ. ಸ್ಥಳೀಯರ ಮಾಹಿತಿ ಮೆರೆಗೆ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂಸೇವಕರು ಗಾಯಗೊಂಡ ಜಿಂಕೆಗೆ ಚಿಕಿತ್ಸೆ ಕೊಡಿಸಿದ್ದಾರೆ. ಅರಣ್ಯ ಇಲಾಖೆ ಸ್ವಯಂಸೇವಕ ಯಲ್ಲಪ್ಪ ಜೋಡಳ್ಳಿ ಹಾಗೂ ಸಿಬ್ಬಂದಿ ಜಿಂಕೆಯನ್ನು ಕರೆತಂದು ಕೃವಿವಿ ವೈದ್ಯ ಅನಿಲ ಪಾಟೀಲ ಅವರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ.
ಗಾಯಗೊಂಡಿರುವ ಜಿಂಕೆ ಅರಣ್ಯ ಇಲಾಖೆ ವಶದಲ್ಲಿದ್ದು, ಎಂಟರಿಂದ ಹತ್ತು ದಿನದಲ್ಲಿ ಜಿಂಕೆ ಚೇತರಿಸಿಕೊಳ್ಳಬಹುದೆಂದು ವೈದ್ಯರು ತಿಳಿಸಿದ್ದಾರೆ. ಜಿಂಕೆ ಚೇತರಿಸಿಕೊಂಡ ಬಳಿಕ ಅದನ್ನು ಪುನಃ ಕಾಡಿಗೆ ಬಿಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಸಂಡೂರು: ರಸ್ತೆಯಲ್ಲಿ ನೀರು ಕುಡಿದ ಚಿರತೆ
ಕಾಡಿನಲ್ಲಿ ಆಹಾರ ಸಿಗದೆ ಜಿಂಕೆ ನಾಡಿಗೆ ಬಂದಿರಬಹುದು ಎಂದು ಊಹಿಸಲಾಗಿದೆ.