ಹುಬ್ಬಳ್ಳಿ: ಕುಂದಗೋಳ ವಿಧಾನಸಭೆಯ ಮೈತ್ರಿ ಅಭ್ಯರ್ಥಿ ಕುಸುಮ ಶಿವಳ್ಳಿ ಪರ ಸಚಿವ ಡಿ.ಕೆ.ಶಿವಕುಮಾರ ಛಬ್ಬಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ರೋಡ್ ಶೋ ವೇಳೆ ಗ್ರಾಮದ ಹೊರವಲಯದಲ್ಲಿ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಈ ಸಂದರ್ಭ ಸಾವಿರಾರು ಮೈತ್ರಿ ಪಕ್ಷದ ಕಾರ್ಯಕರ್ತರು ಸಾಥ್ ನೀಡಿದರು.
ಪ್ರಚಾರದಲ್ಲಿ ಭಾಗಿಯಾದ ರೆಬೆಲ್ ಶಾಸಕ ಮಹೇಶ್ ಕಮಟಳ್ಳಿ...
ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಈಗ ಡಿಕೆಶಿ ಜೊತೆಗೆ ಕಮಡೊಳ್ಳಿಯಲ್ಲಿ ಪ್ರಚಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ರಮೇಶ ಜಾರಕಿಹೊಳಿಗೆ ಶಾಕ್ ನೀಡಿದರು. ಇದೇ ವೇಳೆ ಮಾತನಾಡಿದ ಡಿ. ಕೆ. ಶಿವಕುಮಾರ ಸರ್ಕಾರ ಸುಭದ್ರವಾಗಿದೆ, ಕಮಟಳ್ಳಿ ಕುಸುಮ ಶಿವಳ್ಳಿ ಗೆಲುವಿಗಾಗಿ ನಿಮ್ಮ ಮುಂದೆ ಬಂದಿದ್ದಾರೆ. ನೀವೆಲ್ಲ ಕಾಂಗ್ರೆಸ್ಗೆ ಮತ ಹಾಕಿದ್ರೆ, ಇವಿಯಂ ಮಶಿನ್ನಲ್ಲಿ ಸೌಂಡ್ ಬರೋದು ಮೋದಿಗೆ ಕೇಳಬೇಕು. ಚುನಾವಣೆ ಮುಗಿದ ಮೇಲೆ ಚಿಕ್ಕನಗೌಡರ್ ಮತ್ತು ಯಡಿಯೂರಪ್ಪನವರ ಡಬ್ಬಿ ಖಾಲಿಯಾಗಬೇಕು ಎಂದರು.
ಇನ್ನೂ ಇದೇ ವೇಳೆ ಮಾತನಾಡಿದ ಮಹೇಶ ಕಮಟಳ್ಳಿ ನಾನು ಪಕ್ಷವನ್ನು ತೊರೆಯುವ ಮಾತೆ ಇಲ್ಲ. ನಾನು ಪಕ್ಷಕ್ಕೆ ಬದ್ದನಾಗಿರುವವನು. ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಹಜ ಅದನ್ನು ನಾನು ಮರೆತು ಪಕ್ಷಕ್ಕಾಗಿ ದುಡಿಯುವೆ ಎಂದರು.