ETV Bharat / state

ಹುಬ್ಬಳ್ಳಿಯಲ್ಲಿ ಭಿಕ್ಷುಕರ ಹಾವಳಿ: ಫುಟ್‌ಪಾತ್ ಮೇಲೆ ಮಲಗಬೇಡಿ ಎಂದ್ರೆ ಕಿರಿಕ್

author img

By

Published : Oct 14, 2020, 5:00 PM IST

Updated : Oct 14, 2020, 5:06 PM IST

ಹುಬ್ಬಳ್ಳಿಯಲ್ಲಿ ಭಿಕ್ಷುಕರ ಉಪಟಳ ಹೆಚ್ಚಾಗಿದ್ದು,ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮಲಗಿ ಸಾರ್ವಜನಿಕರಿಗೆ ಕಿರಿ-ಕಿರಿ ಉಂಟು ಮಾಡುತ್ತಿದ್ದಾರೆ.

ffd
ಹುಬ್ಬಳ್ಳಿಯಲ್ಲಿ ಭಿಕ್ಷುಕರಿಂದ ಸಾರ್ವಜನಿಕರಿಗೆ ತೊಂದರೆ

ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿಯಲ್ಲಿ ಎಲ್ಲೆಂದರಲ್ಲಿ ನೆಲವನ್ನು ಹಾಸಿಗೆ ಮಾಡಿಕೊಂಡು, ಆಕಾಶವನ್ನು ಹೊದಿಕೆ ಮಾಡಿಕೊಂಡು ಮಲಗುವ ಭಿಕ್ಷುಕರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.

ನಗರದ ಚೆನ್ನಮ್ಮ ವೃತ್ತದ ಬಳಿಯ ರಸ್ತೆಯಲ್ಲಿ ಮಲಗಿಕೊಂಡಿರುವ ಭಿಕ್ಷುಕರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹಲವು ಬಾರಿ ಪಾದಚಾರಿಗಳೊಂದಿಗೆ ಭಿಕ್ಷುಕರು ಜಗಳ ಕೂಡ ಮಾಡಿರುವಂತ ಸನ್ನಿವೇಶಗಳು ನಡೆದಿವೆ. ಅಲ್ಲದೇ ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ವಸತಿ ಹಾಗೂ ಊಟದ ಕಲ್ಪಿಸಬೇಕಿರುವ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ.

ಅಲ್ಲದೇ ಭಿಕ್ಷುಕರಿಗಾಗಿಯೇ ನೈಋತ್ಯ ರೈಲ್ವೆ ಇಲಾಖೆಯಿಂದ ಅಂತ್ಯೋದಯ ಕಲ್ಯಾಣ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಭಿಕ್ಷುಕರು, ನಿರ್ಗತಿಕರು ಮಾತ್ರ ಇತ್ತ ತಲೆ ಕೂಡ ಇಟ್ಟು ಮಲಗುತ್ತಿಲ್ಲ. ಫುಟ್​ಪಾತ್ ಬಿಟ್ಟು ಮಲಗಿ ಅಂದ್ರೆ ಸಾರ್ವಜನಿಕರಿಗೆ ಅವಾಜ್ ಹಾಕುತ್ತಿದ್ದಾರೆ ಎಂಬ ಆರೋಪ ಸಹ ಇದೆ. ಇವರಲ್ಲಿ ಮಾನಸಿಕ ಅಸ್ವಸ್ಥರು ಹಾಗೂ ನಿರ್ಗತಿಕರು ಹೆಚ್ಚಾಗಿದ್ದು,ಜಿಲ್ಲಾಡಳಿತ ಸೂಕ್ತ ನಿರ್ದೇಶನದ ಮೇರೆಗೆ ಭಿಕ್ಷುಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಹಿತ ಕಾಪಾಡಬೇಕಿದೆ.

Last Updated : Oct 14, 2020, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.