ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹಳ್ಳಿಗಳಲ್ಲಿರುವ ಜನರೇ ಸ್ವಯಂ ಪ್ರೇರಿತ ಲಾಕ್ಡೌನ್ ಜಾರಿ ಮಾಡಿಕೊಳ್ತಾಯಿದ್ದಾರೆ. ಅಷ್ಟರಮಟ್ಟಿಗೆ ಜನ ಜಾಗೃತರಾಗಿದ್ದಾರೆ.
ಕೊರೊನಾ ಸೋಂಕು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದೆ. ಈಗಾಗಲೇ ನವಲಗುಂದ ತಾಲೂಕಿನ ಮೊರಬ ಹಾಗೂ ಶಿರಕೋಳ ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ಆ ಗ್ರಾಮಗಳನ್ನು ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಗ್ರಾಮಸ್ಥರು ಮನೆಯಲ್ಲೇ ಇರುತ್ತಿದ್ದಾರೆ. ನಿನ್ನೆಯಷ್ಟೇ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಇದೀಗ ಆ ಗ್ರಾಮಸ್ಥರು ಕೂಡ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಿದ್ದಾರೆ.