ಧಾರವಾಡ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹೆಸರು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ಹಾನಿಯ ಪ್ರದೇಶಗಳಿಗೆ ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![MLA Amrut Desai, DC visits crop damage areas](https://etvbharatimages.akamaized.net/etvbharat/prod-images/kn-dwd-1-mla-dc-visit-av-ka10001_23082020132752_2308f_1598169472_1069.jpg)
ಹೆಸರು ಬೆಳೆ ಹಾನಿಯ ಕುರಿತು ರೈತರ ಅಹವಾಲುಗಳನ್ನು ಆಲಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಈ ಕುರಿತು ಮಂಗಳವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಬೆಳೆಹಾನಿ ಪರಿಹಾರ ಮತ್ತಿತರ ವಿಷಯಗಳ ಕುರಿತು ಚರ್ಚಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
![MLA Amrut Desai, DC visits crop damage areas](https://etvbharatimages.akamaized.net/etvbharat/prod-images/kn-dwd-1-mla-dc-visit-av-ka10001_23082020132752_2308f_1598169472_453.jpg)
ಹಳ್ಳದಲ್ಲಿ ಕೊಚ್ಚಿಹೊದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ
ತುಪ್ಪರಿಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ಹಾರೋಬೆಳವಡಿಯ ಮಡಿವಾಳಪ್ಪ ಜಕ್ಕಣ್ಣವರ ಅವರ ತಂದೆ ನಾಗಪ್ಪ ಜಕ್ಕಣ್ಣವರ ಅವರಿಗೆ 5 ಲಕ್ಷ ರೂ.ಗಳ ಮೊತ್ತದ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. ಈ ಕುರಿತು ಈಟಿವಿ ಭಾರತ ಕೂಡಾ ವಿಶೇಷ ವರದಿ ಪ್ರಕಟಿಸಿ ಮೃತನ ತಂದೆ ತಾಯಿಯ ಸಂಕಷ್ಟದ ಬಗ್ಗೆ ವರದಿ ಮಾಡಿತ್ತು. ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ., ತಹಶೀಲ್ದಾರ್ ಡಾ.ಸಂತೋಷ್ ಕುಮಾರ ಬಿರಾದಾರ ಮತ್ತಿತರರು ಇದ್ದರು.