ETV Bharat / state

ಧಾರವಾಡ: ಐಐಐಟಿ ಲೋಕಾರ್ಪಣೆಗೊಳಿಸಿದ ದೇಶದ ಮೊದಲ ಪ್ರಜೆ ದ್ರೌಪದಿ ಮುರ್ಮು - ಈಟಿವಿ ಭಾರತ್​ ಕನ್ನಡ

ಧಾರವಾಡದ ಐಐಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದರು. ನೂತನ ಶಿಕ್ಷಣ ನೀತಿ ಅಳವಡಿಸಿಕೊಂಡು ತಾಂತ್ರಿಕವಾಗಿ ಬೆಳೆವಣಿಗೆ ಸಾಧಿಸ ಬೇಕು ಎಂದು ಈ ವೇಳೆ ಆಶಿಸಿದರು.

dharwad-iiit-inaugurated-by-president-draupadi-murmu
Etv Bharatಐಐಐಟಿ ಲೋಕಾರ್ಪಣೆಗೊಳಿಸಿದ ದೇಶದ ಮೊದಲ ಪ್ರಜೆ
author img

By

Published : Sep 26, 2022, 7:38 PM IST

Updated : Sep 26, 2022, 8:10 PM IST

ಧಾರವಾಡ: ತಾಲೂಕಿನ ತಡಸಿನಕೊಪ್ಪ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಐಐಐಟಿ ಕೇಂದ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಾರ್ಪಣೆ ಗೊಳಿಸಿದರು. ದೇಶದ ಮೊದಲ‌ ಪ್ರಜೆ ದ್ರೌಪದಿ ಮುರ್ಮು ಅವರಿಗೆ ಸುಧಾಮೂರ್ತಿ, ಕೌದಿ- ಸೀರೆ ಹಾಗೂ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದರು.

ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು ಅವರು, ಇವತ್ತು ಇಲ್ಲಿಗೆ ಬಂದು ಸಂತೋಷ ಆಗಿದೆ. ನಮಗೆ ಗರ್ವದ ವಿಷಯ ಇದು ತಂತ್ರಜ್ಞಾನ ಬೆಳೆದು ಭವಿಷ್ಯ ಉಜ್ವಲ ಆಗಲಿ, ತಮ್ಮ ಸೇವೆ ದೊಡ್ಡ ಕಂಪನಿಗಳಲ್ಲಿ ಆಗಲಿ ಹೆಚ್ಚು ಹೆಸರು ಬೆಳಯಲಿ. ಪ್ರಧಾನಮಂತ್ರಿ ಇದರ ಶಿಲಾನ್ಯಾಸ ಮಾಡಿದ್ದರು. ಐಐಐಟಿ ಜ್ಞಾನ ವಿಕಾಸ ಎಂದು ಹೆಸರು ಇಡಲಾಗಿದೆ ಎಂದರು.

ನಮ್ಮ ಯುವಕರು ತಂತ್ರಜ್ಞಾನದಲ್ಲಿ ನಿಪುಣ‌ವಾಗಬೇಕು. ಅದಕ್ಕಾಗಿ ಈ ಸಂಸ್ಥೆ ಹುಟ್ಟು ಹಾಕಲಾಗಿದೆ. ಇಲ್ಲಿ ಬಹಳ ವಿಷಯಗಳ ಬಗ್ಗೆ ಅಭ್ಯಾಸ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಸಂಶೋಧನೆಗೆ‌ ಕೂಡಾ ಮಹತ್ವ ಇದೆ. ಹೊಸ ಶಿಕ್ಷಣ ನೀತಿ ತರಲಾಗಿದೆ, ಅದನ್ನ ಕೂಡ ನಾವು ಬೆಳೆಸಬೇಕು. ನ್ಯಾನೊ, ಬಯೋ ಸೇರಿ ಹಲವು ವಿಷಯ ಬಗ್ಗೆ ಕೂಡಾ ಹೆಚ್ಚು ಒತ್ತು ನೀಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಎಲ್ಲರೂ ಈ ಸಂಸ್ಥೆ ಬೆಳೆಯಲು ಮಾಡಿದ ಎಲ್ಲ‌‌ ಪ್ರಯತ್ನಕ್ಕೆ ನಾನು ಧನ್ಯವಾದ ಹೇಳುತ್ತೇನೆ. ದೇಶ ಬದಲಾವಣೆ ಆಗುತ್ತಿದೆ, ಡಿಜಿಟಲ್ ಆಗುತ್ತಿದೆ ಎಂದು ಹೇಳಿದರು.

ಐಐಐಟಿ ಲೋಕಾರ್ಪಣೆಗೊಳಿಸಿದ ದೇಶದ ಮೊದಲ ಪ್ರಜೆ

ಇದರ‌ ಲಾಭ ಪಡೆಯಲು ಸಂಶೋಧನೆ ಕಡೆ ಹೆಚ್ಚು ಒತ್ತು ಕೊಡಬೇಕು. ನಿಮ್ಮ ಸಂಸ್ಥೆಯಲ್ಲಿ ಯುವತಿಯರಿಗೆ ಹೆಚ್ಚು ಒತ್ತು ಕೊಡಲಾಗಿದೆ. ಇದಕ್ಕೆ ನಮ್ಮ ಮಕ್ಕಳಿಗೆ ಒದಲು ಒಳ್ಳೆಯ ಅವಕಾಶ ಇದೆ. ಇಲ್ಲಿ ಐಐಟಿ ಕೂಡಾ ಇದೆ‌,‌ ಅದರ ಜೊತೆ ಹಲವು ಶಿಕ್ಷಣ ಇವೆ. ಬೆಂಗಳೂರು ಕೂಡಾ ಇಲ್ಲಿಂದ ದೂರ ಇಲ್ಲ ಎಲ್ಲರೂ ಒಂದಾಗಿ ನಾವು ಹೊಸ ಕಡೆಗೆ ಇದನ್ನ ತೆಗೆದುಕೊಂಡ ಹೋದರೆ ಗೆಲುವು ಸಾಧ್ಯ ಎಂದರು.

ಇದನ್ನೂ ಓದಿ : ಪೌರ ಸನ್ಮಾನ ದೇಶದ ಸಮಸ್ತ ಮಹಿಳೆಯರಿಗೆ ಸಂದ ಗೌರವ: ರಾಷ್ಟ್ರಪತಿ ದ್ರೌಪದಿ ಮುರ್ಮು

Last Updated : Sep 26, 2022, 8:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.