ETV Bharat / state

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ

author img

By

Published : Oct 27, 2021, 10:48 PM IST

ನಾಮಪತ್ರ ತಿರಸ್ಕರಿಸುವಂತೆ ನಾಗರಾಜ ಕಿರಣಗಿ, ಚುನಾವಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದ್ದರು, ಚುನಾವಣಾಧಿಕಾರಿ ಕ್ರಮ‌ ಕೈಗೊಳ್ಳದ ಹಿನ್ನೆಲೆ‌ ಹೈಕೋರ್ಟ್ ಮೊರೆ ಹೋಗಿದ್ದರು. ಕಿರಣಗಿ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ನ್ಯಾಯಮೂರ್ತಿ ಸುಂದರ ಗೋವಿಂದರಾಜ್‌ರಿಂದ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ..

ಧಾರವಾಡ ಹೈಕೋರ್ಟ್‌
ಧಾರವಾಡ ಹೈಕೋರ್ಟ್‌

ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ನವೆಂಬರ್ 26ರಂದು ಕಸಾಪ ಚುನಾವಣೆ ನಡೆಯಬೇಕಿತ್ತು.

ನಿಯಮ ಬಾಹಿರ ಸ್ಪರ್ಧೆ ವಿರುದ್ಧ ರಿಟ್ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ಕಿರಣಗಿ ರಿಟ್ ಅರ್ಜಿ ಸಲ್ಲಿಸಿದ್ದರು. ಲಿಂಗರಾಜ ಅಂಗಡಿ ಸ್ಪರ್ಧೆ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಲಿಂಗರಾಜ, ಕಸಾಪ ಹಿಂದಿನ ಅಧ್ಯಕ್ಷರಾಗಿದ್ದರು.

ಎರಡು ಬಾರಿ ಅಧ್ಯಕ್ಷರಾಗಿದ್ದ ಅಂಗಡಿ ಅವರು 3ನೇ ಸಲ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದರು. ನಿರಂತರ 2 ಸಲ ಸ್ಪರ್ಧಿಸದಂತೆ ಇರುವ ಕಸಾಪ ನಿಯಮ ಉಲ್ಲಂಘಿಸಿ 3ನೇ ಬಾರಿಯೂ ಅಂಗಡಿ ಸ್ಪರ್ಧಿಸಿದ್ದರು.

ನಾಮಪತ್ರ ತಿರಸ್ಕರಿಸುವಂತೆ ನಾಗರಾಜ ಕಿರಣಗಿ, ಚುನಾವಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದ್ದರು, ಚುನಾವಣಾಧಿಕಾರಿ ಕ್ರಮ‌ ಕೈಗೊಳ್ಳದ ಹಿನ್ನೆಲೆ‌ ಹೈಕೋರ್ಟ್ ಮೊರೆ ಹೋಗಿದ್ದರು. ಕಿರಣಗಿ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ನ್ಯಾಯಮೂರ್ತಿ ಸುಂದರ ಗೋವಿಂದರಾಜ್‌ರಿಂದ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.