ಧಾರವಾಡ: ಪೇಡಾ ನಗರಿ ಧಾರವಾಡದಲ್ಲೂ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದೆ.ಇದರ ಮಧ್ಯೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಐವರು ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಚೇರಿ ಸ್ಯಾನಿಟೈಸ್ ಮಾಡಿ, ಎರಡು ದಿನ ಸೀಲ್ಡೌನ್ ಮಾಡಲಾಗಿದೆ.
ಸೋಮವಾರ ಏರ್ಪಡಿಸಿದ್ದ ಆ್ಯಂಟಿಜೆನ್ ಟೆಸ್ಟ್ನಲ್ಲಿ ಐವರಿಗೆ ಸೋಂಕು ದೃಡಪಟ್ಟಿರುವ ಕಾರಣ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಸೀಲ್ಡೌನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ನಿನ್ನೆ ಧಾರವಾಡದಲ್ಲಿ 157 ಜನರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 6126 ಆಗಿದ್ದು, ಸದ್ಯ 2413 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 197 ಜನರು ಸಾವನ್ನಪ್ಪಿದ್ದಾರೆ.