ಧಾರವಾಡ: ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಧಾರವಾಡ ವಾರ್ತಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಶಿಲ್ಡ್ ಲಸಿಕೆಯನ್ನು ಹಾಕಿಸಲಾಯಿತು.
ಓದಿ: ವ್ಯಾಕ್ಸಿನ್ ಇಲ್ಲದೇ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದ್ದಾರೆ.. ಸಿದ್ದರಾಮಯ್ಯ
ಸುಮಾರು 85 ಜನ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು, ಫೋಟೋಗ್ರಾಫರ್, ವಿಡಿಯೋ ಗ್ರಾಫರ್ ಗಳು ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಲಸಿಕೆ ಪಡೆದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ ಹಾಗೂ ಆರ್.ಸಿ.ಎಚ್.ಓ ಡಾ. ಎಸ್.ಎಮ್. ಹೊನಕೇರಿ ಅವರು ಖುದ್ದು ಪರಿಶೀಲಿಸಿ, ಲಸಿಕಾಕರಣದ ಮೇಲ್ವಿಚಾರಣೆ ಮಾಡಿದರು. ಮಾಧ್ಯಮ ಕೊರೊನಾ ವಾರಿಯರ್ಸ್ ಬೇಡಿಕೆಯಂತೆ ಲಸಿಕಾಕರಣಕ್ಕೆ ಆದ್ಯತೆ ನೀಡಿ, ಒಂದೇ ಸ್ಥಳದಲ್ಲಿ ಸ್ಪಾಟ್ ರಿಜಿಸ್ಟ್ರೇಶನ್ ಮಾಡಿಕೊಳ್ಳುವ ಮೂಲಕ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಾರ್ತಾ ಇಲಾಖೆ ಧನ್ಯವಾದ ಅರ್ಪಿಸಿದೆ.