ETV Bharat / state

ಧಾರವಾಡ ದಸರಾ: ಅಂಬಾರಿ ಹೊರಲಿದೆ ಆನೆ ಕಲಾಕೃತಿಯ ಓಮ್ನಿ ಕಾರು

author img

By

Published : Oct 25, 2020, 8:48 AM IST

Updated : Oct 25, 2020, 10:13 AM IST

ಈ ಬಾರಿ ಕೊರೊನಾ ಕಾರಣದಿಂದಾಗಿ ಜಂಬೂಸವಾರಿಗೆ ಬ್ರೇಕ್ ಬಿದ್ದಿದ್ದು, ಆನೆ ಮೇಲೆ ಜಂಬೂ ಸವಾರಿ ಬದಲಾಗಿ ಮಾರುತಿ ಓಮ್ನಿ ಕಾರಿಗೆ ಗಜರಾಜನ ಕಲಾಕೃತಿ ಮಾಡಲಾಗಿದೆ.

Elephant artworked Omni Car Carry Ambari in Dharwad
ಅಂಬಾರಿ ಹೊರಲಿದೆ ಆನೆ ಕಲಾಕೃತಿಯ ಓಮಿನಿ ಕಾರು

ಧಾರವಾಡ: ನಗರದಲ್ಲಿಂದು ಜಂಬೂ ಸವಾರಿ ನಡೆಯಲಿದೆ. ಉತ್ತರ ಕರ್ನಾಟಕದ ಜಂಬೂ ಸವಾರಿ ಎಂದು ಹೆಸರುವಾಸಿಯಾಗಿರುವ ದಸರಾ ವೈಭವ ಶುರುವಾಗಲಿದೆ. ಮೈಸೂರಿನ ಜಂಬೂ ಸವಾರಿಗಿಂತ ಒಂದು ದಿನ ಮೊದಲು ನಗರದಲ್ಲಿ ಜಂಬೂ ಸವಾರಿ ನಡೆಯುವುದು ವಾಡಿಕೆ.

ಖ್ಯಾತ ಕಲಾವಿದ ಮಂಜುನಾಥ ಹಿರೇಮಠ ಪ್ರತಿಕ್ರಿಯೆ

ಈ ಬಾರಿ ಕೊರೊನಾ ಕಾರಣದಿಂದಾಗಿ ಜಂಬೂ ಸವಾರಿಗೆ ಬ್ರೇಕ್ ಬಿದ್ದಿದ್ದು, ಈ ಸಲ ಆನೆ ಮೇಲೆ ಜಂಬೂ ಸವಾರಿ ಬದಲಾಗಿ ಮಾರುತಿ ಓಮ್ನಿ ಕಾರಿಗೆ ಗಜರಾಜನ ಕಲಾಕೃತಿ ಮಾಡಲಾಗಿದೆ. ನಗರದ ಖ್ಯಾತ ಕಲಾವಿದ ಮಂಜುನಾಥ ಹಿರೇಮಠ ಕೈಚಳಕದಲ್ಲಿ ಮಾರುತಿ ಓಮ್ನಿ ಕಾರಿನ ಮೇಲೆ ಗಜರಾಜನ ಕಲಾಕೃತಿ ಮೂಡಿಬಂದಿದ್ದು ವಿಶೇಷ ಆಕರ್ಷಣೆಯಾಗಿದೆ.

ಇಂದು ಮಧ್ಯಾಹ್ನ ಗಾಂಧಿನಗರದ ಬಂಡೆಮ್ಮ ಮೂರ್ತಿ ಹೊತ್ತ ಮಾರುತಿ ಓಮ್ನಿಯ ಗಜರಾಜನ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ. ಪ್ರತಿ ವರ್ಷ 3 ಆನೆಗಳು ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದವು. ಈ ಬಾರಿ ಕೊರೊನಾ ಕಾರಣದಿಂದಾಗಿ ಅದ್ಧೂರಿ ಜಂಬೂ ಸವಾರಿಗೆ ಬ್ರೇಕ್ ಬಿದ್ದಿದೆ. ಆನೆಗಳ ಬದಲಾಗಿ ಮಾರುತಿ ಓಮ್ನಿಯ ಗಜರಾಜ ಪ್ರಮುಖ ಆಕರ್ಷಣೆಯಾಗಿದೆ.

Last Updated : Oct 25, 2020, 10:13 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.