ETV Bharat / state

ಧಾರವಾಡ ಜಿಲ್ಲಾಸ್ಪತ್ರೆ ಸಿಬ್ಬಂದಿ ಎಡವಟ್ಟು: ಮೃತ ಯುವತಿಯರ ಶವಗಳು ಅದಲು-ಬದಲು

ಇಂದು ಬೆಳಗ್ಗೆ ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದರು. ಅವರ ಶವಗಳನ್ನು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿಯ ಯಡವಟ್ಟಿನಿಂದ ಇಬ್ಬರು ಯುವತಿಯರ ಶವಗಳು ಅದಲು-ಬದಲಾಗಿರುವ ಘಟನೆ ನಡೆದಿದೆ.

ಶವಗಳು ಅದಲು-ಬದಲು
two dead body exchange in dharwad hospital
author img

By

Published : Jan 15, 2021, 6:09 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಯಡವಟ್ಟಿನಿಂದಾಗಿ ಇಟ್ಟಿಗಟ್ಟಿ ಅಪಘಾತದಲ್ಲಿ ಮೃತಪಟ್ಟವರ ಶವಗಳು ಅದಲು ಬದಲಾಗಿರುವ ಘಟನೆ ನಡೆದಿದೆ.

ಇಂದು ಬೆಳಗ್ಗೆ ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದು, ಮೃತರಲ್ಲಿ ಅಸ್ಮಿತಾ ಹಾಗೂ ಪರಂಜ್ಯೋತಿ ಎಂಬ ಯುವತಿಯರಿದ್ದರು. ಈ ಇಬ್ಬರ ಶವಗಳನ್ನು ಗುರುತಿಸುವಲ್ಲಿ ಗೊಂದಲ ಸೃಷ್ಟಿಯಾಗಿ ಪರಂಜ್ಯೋತಿ ಎಂದು ಅಸ್ಮಿತಾ ಶವವನ್ನು ಪರಂಜ್ಯೋತಿ ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ.

ಓದಿ: ಸಂಕ್ರಮಣದ ಕೆಟ್ಟ ಕರಿ ದಿನವೇ ಭೀಕರ ರಸ್ತೆ ಅಪಘಾತ.. ಬಾರದ ಲೋಕಕ್ಕೆ ತೆರಳಿದ ಬಾಲ್ಯದ ಗೆಳತಿಯರು!

ಅಪಘಾತದಲ್ಲಿ ಮಗಳು ಅಸ್ಮಿತಾ ಹಾಗೂ ಅವರ ತಾಯಿ ಹೇಮಲತಾ ಮೃತಪಟ್ಟಿದ್ದು, ಅಸ್ಮಿತಾ ಶವವನ್ನು ಹುಡುಕುವಾಗ ಶವ ಅದಲು ಬದಲಾಗಿರುವುದು ಬಯಲಾಗಿದೆ. ಅಸ್ಮಿತಾ ಶವವನ್ನು ಹಾವೇರಿಯ ಬಂಕಾಪುರದವರೆಗೆ ತೆಗೆದುಕೊಂಡು ಹೋಗಲಾಗಿದ್ದು, ಶವವನ್ನು ತರಲು ಪೊಲೀಸ್ ಸಿಬ್ಬಂದಿ ಬಂಕಾಪುರಕ್ಕೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.