ಹುಬ್ಬಳ್ಳಿ : ಇತ್ತೀಚೆಗೆ ಫೇಸ್ಬುಕ್ನಲ್ಲಿ ನಟರ ಹಾಗೂ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ಹೆಸರು ಬಳಸಿ ಹಣ ಕೇಳುತ್ತಿರುವ ಆರೋಪಗಳು ಕೇಳಿ ಬಂದಿತ್ತು. ಇದೀಗ ಐಪಿಎಸ್ ಅಧಿಕಾರಿಯ ಹೆಸರಿನಿಂದ ಹುಬ್ಬಳ್ಳಿಯ ಯುವಕನಿಗೆ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಹಿಸಿ ಹಣ ಕೇಳಿರುವ ಪ್ರಕರಣ ಬೆಳಕಿಗೆ ಬಂದಿದೆ.
ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ ಹೆಸರಲ್ಲಿ ಹುಬ್ಬಳ್ಳಿ ರಾಜವರ್ಧನ ಭಾಗವತ್ ಎಂಬುವರಿಗೆ ವ್ಯಕ್ತಿಯೋರ್ವ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಅಲ್ಲದೇ ನಿರಂತರವಾಗಿ ಮೆಸೇಜ್ ಮಾಡಿ ₹25,000 ಹಣ ನೀಡುವಂತೆ ಕೇಳಿದ್ದಾನೆ.
ರಾಜವರ್ಧನ್‌ಗೆ ಆತನ ಮೇಲೆ ಸಂಶಯ ಬಂದು ಹಣ ನೀಡದೆ ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಇಂತಹ ಅನೇಕ ಫೇಕ್ ಅಕೌಂಟ್ನಿಂದ ಹಣ ಕೇಳುತ್ತಿದ್ದಾರೆ. ಆದ್ದರಿಂದ ಯಾರೂ ಮೋಸ ಹೋಗಬೇಡಿ ಎಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ ರಾಜವರ್ಧನ್.