ETV Bharat / state

ದೆಹಲಿ-ಹುಬ್ಬಳ್ಳಿ ಸ್ಟಾರ್ ಏರ್ ವಿಮಾನ ತಾತ್ಕಾಲಿಕ ಸ್ಥಗಿತ - Star Air flight

ಇಂದು ದೆಹಲಿ ಮತ್ತು ಹುಬ್ಬಳ್ಳಿ ನಡುವಿನ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಟಾರ್ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.

Star air
Star air
author img

By

Published : Oct 16, 2020, 12:19 PM IST

ಹುಬ್ಬಳ್ಳಿ: ದೆಹಲಿಯ ಹಿಂಡನ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಕಾರ್ಯಾಚರಣೆಯ ಕಾರಣದಿಂದಾಗಿ ಇಂದು ದೆಹಲಿ ಮತ್ತು ಹುಬ್ಬಳ್ಳಿ ನಡುವಿನ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಟಾರ್ ಏರ್ ಸಂಸ್ಥೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸ್ಟಾರ್ ಏರ್, ವಿಮಾನವು ಸಂಜೆ 4.35 ಕ್ಕೆ ಹಿಂಡನ್ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 7.10 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಲು ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ ಕಾರ್ಯಾಚರಣೆ ಕಾರಣದಿಂದ ಹಾರಾಟ ಸ್ಥಗಿತಗೊಳಿಸಲಾಗಿದೆ.

ಪ್ರಯಾಣಿಕರು ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿದ್ದರೆ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿಕೊಳ್ಳಬಹುದು. ಅಥವಾ ಅಕ್ಟೋಬರ್‌ 18 ರವರೆಗೆ ತಮ್ಮ ಪ್ರಯಾಣವನ್ನು ಮರುಹೊಂದಿಸಬಹುದು ಎಂದು ಸ್ಟಾರ್ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.