ಧಾರವಾಡ : ರಾಜ್ಯಾದ್ಯಂತ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ, ಆದ್ರೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಭಾನುವಾರದಿಂದ ದೇವಸ್ಥಾನ ತೆರೆಯಲು ಸಕಲ ಸಿದ್ದತೆ ಮಾಡಿಕೊಂಡು ಜಿಲ್ಲೆಯಾದ್ಯಂತ ಎಲ್ಲಾ ದೇವಸ್ಥಾನ, ಚರ್ಚ್ ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳು ಓಪನ್ ಆಗಿವೆ. ಆದ್ರೆ ಭಕ್ತರ ಸಂಖ್ಯೆ ಮಾತ್ರ ಇಳಿಮುಖವಾಗಿರುವುದು ಕಂಡು ಬಂದಿತು.
ನುಗ್ಗಿಕೇರಿ ಹನುಮಂತ ದೇವಸ್ಥಾನದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್ ವ್ಯವಸ್ಥೆ ಮಾಡಿ, ದೇವರ ದರ್ಶನದ ಜೊತೆಗೆ ಮಂಗಳಾರತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ ಭಕ್ತರು ಮಾತ್ರ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ದೇವಸ್ಥಾನಗಳತ್ತ ಮುಖ ಮಾಡಿರುವುದು ಕಂಡು ಬಂದಿತು.