ಹುಬ್ಬಳ್ಳಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ವಿರುದ್ಧ ದೆಹಲಿ ನ್ಯಾಯಾಲಯ ಡೆತ್ ವಾರೆಂಟ್ ಜಾರಿಗೊಳಿಸಿದ್ದಕ್ಕೆ ಹುಬ್ಬಳ್ಳಿಯಲ್ಲೂ ಮಹಿಳಾ ಸಂಘಟನೆಗಳ ಸದಸ್ಯರು ಸಿಹಿಹಂಚಿ ಸಂಭ್ರಮಿಸಿದರು.
ನಗರದ ಉಡಾನ್ ಅಸೋಸಿಯೇಷನ್ ಎನ್ಜಿಓ ಸೆಕ್ರೆಟರಿ ಬತ್ತೂಲ್ ಕಿಲ್ಲೇದಾರ್ ನೇತೃತ್ವದಲ್ಲಿ ಮಹಿಳೆಯರು ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ತಡವಾಗಿಯಾದ್ರೂ ತಕ್ಕ ಶಿಕ್ಷೆಯಾಗ್ತಿದೆ. ಇಂತಹ ಅತ್ಯಾಚಾರಿಗಳಿಗೆ ಶೀಘ್ರವಾಗಿ ಶಿಕ್ಷೆ ನೀಡುವಂತ ಕಾನೂನುಗಳನ್ನು ಸರ್ಕಾರ ಜಾರಿಗೆ ತರಬೇಕು. ಅತ್ಯಾಚಾರ ಪ್ರಕರಣ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಎನ್ಜಿಓ ಸೆಕ್ರೆಟರಿ ಬತ್ತೂಲ್ ಕಿಲ್ಲೇದಾರ್ ಒತ್ತಾಯಿಸಿದರು.