ಧಾರವಾಡ: ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಮಾಡಿದ ಆರೋಪದಡಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.
![DC Nitesh Patilorders suspension of four officers](https://etvbharatimages.akamaized.net/etvbharat/prod-images/9942322_sijidjf.jpg)
ಯಾದವಾಡ ವಿಲೇಜ್ ಅಕೌಂಟೆಂಟ್ ರಾಕೇಶ ಪಾಟೀಲ್, ಕಂದಾಯ ನಿರೀಕ್ಷಕ ಎನ್.ಎಸ್. ಪಟ್ಟೇದ್, ಪಿಡಬ್ಲೂಡಿ ಎಇ ನಿಖಿಲೇಶ ಭಾರದೇಶ, ಪಿಡಿಒ ಪೀರಪ್ಪ ವಾಲೀಕಾರ್ ಅಮಾನತುಗೊಂಡಿರುವ ಸಿಬ್ಬಂದಿ.
![DC Nitesh Patilorders suspension of four officers](https://etvbharatimages.akamaized.net/etvbharat/prod-images/kn-dwd-1-nalvar-amanatu-av-ka10001_20122020102107_2012f_1608439867_369.jpg)
ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ಹಾಗೂ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತನಿಖೆ ಮಾಡಿಸಿದ್ದರು. ಅವ್ಯವಹಾರ ನಡೆಸಿದ್ದು ಕಂಡು ಬಂದ ಹಿನ್ನೆಲೆ ನಾಲ್ವರನ್ನು ಅಮಾನತುಗೊಳಿಸಿದ್ದಾರೆ.
ಇದನ್ನು ಓದಿ : ಧಾರವಾಡ: ಮೆಗಾ ಲೋಕ ಅದಾಲತ್ನಲ್ಲಿ 342 ಪ್ರಕರಣಗಳ ಇತ್ಯರ್ಥ