ETV Bharat / state

ಧಾರವಾಡ: ಪರಿಷತ್ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ - DC Nitesh patil spoke about nomination submission

ನವೆಂಬರ್‌ 23ರವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಡಿಸೆಂಬರ್ 10 ರಂದು ಮತದಾನ. ಮೂರು ಜಿಲ್ಲೆ ಸೇರಿ ಒಟ್ಟು 7503 ಮತದಾರರಿದ್ದು, ಮತದಾನಕ್ಕೆ ಒಟ್ಟು 504 ಮತಗಟ್ಟೆ ತಯಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ತಿಳಿಸಿದ್ದಾರೆ.

dc-nitesh-patil
ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್
author img

By

Published : Nov 15, 2021, 9:07 PM IST

ಧಾರವಾಡ: ವಿಧಾನ ಪರಿಷತ್ ಚುನಾವಣೆ (Legislative Council Election) ಹಿನ್ನೆಲೆಯಲ್ಲಿ ಧಾರವಾಡದಿಂದ ದ್ವಿಸದಸ್ಯತ್ವಕ್ಕೆ ಚುನಾವಣೆ ನಡೆಯಲಿದೆ.

ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಲಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೂರು ಜಿಲ್ಲೆಯ ಅಭ್ಯರ್ಥಿಗಳು ಧಾರವಾಡ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು. ನಾಳೆಯಿಂದ ನಾಮಪತ್ರ ಸ್ವೀಕಾರ ಆರಂಭಗೊಳ್ಳಲಿದೆ.

ನ.23ರ ವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಡಿಸೆಂಬರ್ 10 ರಂದು ಮತದಾನ ನಡೆಯಲಿದೆ. ಮೂರು ಜಿಲ್ಲೆ ಸೇರಿ ಒಟ್ಟು 7503 ಮತದಾರರಿದ್ದು, ಮತದಾನಕ್ಕೆ ಒಟ್ಟು 504 ಮತಗಟ್ಟೆ ತಯಾರಿ ಮಾಡಲಾಗಿದೆ. ಧಾರವಾಡ ಕೃಷಿ ವಿವಿಯಲ್ಲಿ ಮತ ಎಣಿಕೆ ನಡೆಯಲಿದೆ.

ಚುನಾವಣೆಗೆ 17 ನೋಡಲ್ ಅಧಿಕಾರಿಗಳು ನೇಮಕ ಮಾಡಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಗೆ ಅವಕಾಶ ಇಲ್ಲ. ಮೆರವಣಿಗೆಗೆ ಇನ್ನೂ ಚುನಾವಣಾ ಆಯೋಗ ಅನುಮತಿ ಕೊಟ್ಟಿಲ್ಲ. ಹೀಗಾಗಿ, ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾವು ಭಿಕ್ಷೆ ಬೇಡಿ ಪಕ್ಷ ಕಟ್ಟಬೇಕು, ನಿಮ್ಮ ಹಾಗೇ ತಲೆ ಒಡೆದು ಅಲ್ಲ : ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.