ETV Bharat / state

ಕಿಮ್ಸ್ ಸಂಘರ್ಷ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ - ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ನರ್ಸ್ ಹಾಗೂ ಆಡಳಿತಾಧಿಕಾರಿ ನಡುವಿನ ಸಂಘರ್ಷ

ಕಿಮ್ಸ್ ನಿರ್ದೇಶಕ ಮತ್ತು ನರ್ಸ್​ಗಳೊಂದಿಗೆ‌ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆ ನಡೆಸಿ ನರ್ಸ್ ಹಾಗೂ ಆಡಳಿತಾಧಿಕಾರಿ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿಸಿದ್ದಾರೆ.

Meeting
Meeting
author img

By

Published : Jul 23, 2020, 3:55 PM IST

ಧಾರವಾಡ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನರ್ಸ್ ಹಾಗೂ ಆಡಳಿತಾಧಿಕಾರಿ ನಡುವಿನ ಸಂಘರ್ಷ ವಿಚಾರ ಕೊನೆಗೂ ಧಾರವಾಡ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಕಂಡಿದೆ.

ಡಿಸಿ ಕಚೇರಿಯಲ್ಲಿ ಕಿಮ್ಸ್ ನಿರ್ದೇಶಕ ಮತ್ತು ನರ್ಸ್​ಗಳೊಂದಿಗೆ‌ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆ ನಡೆಸಿ, ಸಮರ್ಪಕ ಸುರಕ್ಷತಾ ಸಾಧನ ನೀಡುವ ಭರವಸೆ ನೀಡಿದ್ದಾರೆ.

ಕರ್ತವ್ಯದ ಸ್ಥಳದಲ್ಲಿ ಊಟ, ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡುವಂತೆ ಡಿಸಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಲು ನರ್ಸ್‌ಗಳು ನಿರ್ಧಾರ ಮಾಡಿದ್ದಾರೆ. ‌

ಸರಿಯಾಗಿ ಸುರಕ್ಷತಾ ಸಾಮಗ್ರಿಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಕಿಮ್ಸ್ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ವಿರುದ್ಧ ನರ್ಸ್​ಗಳು, ಅರೆ ವೈದ್ಯಕೀಯ ಸಿಬ್ಬಂದಿ ಆಕ್ರೋಶಗೊಂಡು ನಿನ್ನೆಯಿಂದ ಕರ್ತವ್ಯಕ್ಕೆ ತೆರಳದೆ ದೂರ ಉಳಿದಿದ್ದರು. ಇದೀಗ ಡಿಸಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.