ETV Bharat / state

ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

author img

By

Published : May 8, 2020, 4:17 PM IST

ನಿನ್ನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಿಂದ 10 ಮಂದಿ ಮೃತಪಟ್ಟಿದ್ದಾರೆ. ಪ್ರಾಣಿ ಪಕ್ಷಿಗಳೂ ಕೂಡಾ ಬಲಿಯಾಗಿವೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೈಗಾರಿಕಾ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

DC Deepa cholan
ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ: ಜಿಲ್ಲೆಯ ವಿವಿಧ ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿ ಇರುವ ಪ್ರಮುಖ ಅಪಾಯಕಾರಿ ಉದ್ಯಮ ಘಟಕಗಳಲ್ಲಿ ಸಮರ್ಪಕವಾಗಿ ಸುರಕ್ಷತಾ ಕ್ರಮ ಅನುಸರಿಸಬೇಕು. ಈ ವಿಚಾರದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

DC Deepa cholan
ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಡಿಸಿ ಸೂಚನೆ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಸಭೆಯಲ್ಲಿ ಅವರು ಮಾತನಾಡಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಿನ್ನೆ ಅನಿಲ ದುರಂತ ಸಂಭವಿಸಿ ಪ್ರಾಣಿ, ಪಕ್ಷಿಗಳು, ಮನುಷ್ಯರು ಬಲಿಯಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಗೋಕುಲ, ತಾರಿಹಾಳ, ರಾಯಾಪುರ, ಗಾಮನಗಟ್ಟಿ, ಬೇಲೂರು ಮತ್ತು ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿ ಇರುವ ಎಲ್ಲಾ ಉದ್ಯಮ ಘಟಕಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ತ್ರೈಮಾಸಿಕವಾಗಿ ನಡೆಸಬೇಕಾದ ಆಪತ್ತು ನಿರ್ವಹಣೆಯ ಅಣುಕು ಪ್ರದರ್ಶನಗಳನ್ನು ಸಮರ್ಪಕವಾಗಿ ಆಯೋಜಿಸಿ ನಿರಂತರವಾಗಿ ಎಲ್ಲಾ ಸುರಕ್ಷತಾ ಕ್ರಮಗಳ ಅರಿವು ಮೂಡಿಸುತ್ತಿರಬೇಕು ಎಂದು ಸೂಚಿಸಿದರು.

ಕಾರ್ಖಾನೆಗಳು ಮತ್ತು ಬಾಯ್ಲರ್​​​​​​​​​ಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಹಾಗೂ ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಸದಸ್ಯ ಕಾರ್ಯದರ್ಶಿ ಭಾರತಿ ಮಗದುಮ್ ಮಾತನಾಡಿ, ಜಿಲ್ಲೆಯ ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ 8 ಪ್ರಮುಖ ಅಪಾಯಕಾರಿ ಘಟಕಗಳಿವೆ. ಉಳಿದಂತೆ ಧಾರವಾಡದಲ್ಲಿ 42, ಹುಬ್ಬಳ್ಳಿಯಲ್ಲಿ 5 ಹಾಗೂ ಕಲಘಟಗಿಯಲ್ಲಿ 1 ಅಪಾಯಕಾರಿ ಘಟಕಗಳಿವೆ. ಸಾರ್ವಜನಿಕ ವಲಯದ ಹೆಚ್​​​​​​ಪಿಸಿಎಲ್​​​, ಬಿಪಿಸಿಎಲ್ ಸೇರಿದಂತೆ ಖಾಸಗಿ ವಲಯದ ಮಹಾ ಎಲ್​​​ಪಿಜಿ ಮತ್ತಿತರ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕ್ರೆಸ್ಟ್ ಸ್ಪೆಷಾಲಿಟಿ ರೆಸಿನ್ಸ್ ಪ್ರೈವೇಟ್ ಲಿಮಿಟೆಡ್​​​​​​​​​​​ ಘಟಕವು ವಿಶಾಖಪಟ್ಟಣಂ ಎಲ್​​​ಜಿ ಪಾಲಿಮರ್ಸ್ ಮಾದರಿಯ ಉತ್ಪಾದನೆಗಳ ಸಣ್ಣ ಘಟಕವಾಗಿದೆ. ಅಲ್ಲಿ 27 ಜನ ಖಾಯಂ ಉದ್ಯೋಗಿಗಳು ಸೇರಿ ಒಟ್ಟು 69 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳ ಪಾಲನೆಯ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕ್ರೆಸ್ಟ್ ಸ್ಪೆಷಾಲಿಟಿ ರೆಸಿನ್ಸ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಮಹಾನಗರ ಡಿಸಿಪಿ ಕೃಷ್ಣಕಾಂತ್, ಜಿ.ಪಂ. ಸಿಇಓ ಡಾ.ಬಿ.ಸಿ. ಸತೀಶ, ಮಹಾನಗರಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹಾಗೂ ಇನ್ನಿತರರು ಈ ಸಭೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.