ETV Bharat / state

ವಿಶೇಷ ಪಾರ್ಟಿ-ಡಿಜೆ ಡಾನ್ಸ್ ನಿಷೇಧ, ಉಲ್ಲಂಘಿಸಿದರೆ ಕಠಿಣ ಕ್ರಮ: ಧಾರವಾಡ ಡಿಸಿ - District Collector Nitesha Patil warns

ಕೊರೊನಾ ಹೊಸ ಸ್ವರೂಪದ ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಹೆಚ್ಚು ಜನಸಂದಣಿ ಸೇರಬಹುದಾದ ಆಚರಣೆ, ಹಬ್ಬ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಪಾಲಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

darawada dc talk about New Year  Celebration Rules news
ಧಾರವಾಡ ಡಿಸಿ
author img

By

Published : Dec 26, 2020, 4:42 PM IST

ಧಾರವಾಡ: ಹೊಸ ವರ್ಷಾಚರಣೆ ಅಂಗವಾಗಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ, ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೊಟೇಲ್, ರೆಸ್ಟೋರೆಂಟ್, ಬಾರ್ ಹಾಗೂ ಕ್ಲಬ್‍ಗಳು ಸೇರಿದಂತೆ ವಿವಿಧ ಮನರಂಜನೆ ಹಾಗೂ ವಾಣಿಜ್ಯ ಸೇವೆ ಸಂಸ್ಥೆಗಳ ಮಾಲೀಕರ ಹಾಗೂ ವ್ಯವಸ್ಥಾಪಕರ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು.

darawada dc talk about New Year  Celebration Rules news
ಧಾರವಾಡ ಡಿಸಿ

ಜಿಲ್ಲೆಯ ಬಾರ್-ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಸೇವಾ ಹಾಗೂ ಮನೋರಂಜನಾ ಕೇಂದ್ರಗಳು, ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಪಾರ್ಟಿ, ರಿಯಾಯಿತಿ ಪ್ಯಾಕೇಜ್, ಡಿಜೆ ಡ್ಯಾನ್ಸ್ ಸೇರಿದಂತೆ ಎಲ್ಲ ತರಹದ ನಿಯೋಜಿತ ಕಾರ್ಯಕ್ರಮಗಳ ಆಯೋಜನೆಯನ್ನು ಡಿಸೆಂಬರ್ 30, 2020 ರಿಂದ ಜನವರಿ 2, 2021 ರವರೆಗೆ ನಿರ್ಬಂಧಿಸಲಾಗಿದೆ.

ಓದಿ:ಹೊಸ ವರ್ಷಕ್ಕೆ ಹೆಚ್ಚು ಜನ ಸೇರುವ ಹಿನ್ನೆಲೆ ಕೆಲವು ನಿರ್ಬಂಧ ಹೇರಲಾಗುತ್ತದೆ: ಗೃಹ ಸಚಿವ ಬೊಮ್ಮಾಯಿ

ಕೊರೊನಾ ಹೊಸ ಸ್ವರೂಪದ ಹರಡುವಿಕೆ ಹಾಗೂ ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚು ಜನಸಂದಣಿ ಸೇರಬಹುದಾದ ಆಚರಣೆ, ಹಬ್ಬ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಪಾಲಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಆದರೆ ಅಬಕಾರಿ, ಪೊಲೀಸ್, ಮಹಾನಗರ ಪಾಲಿಕೆಯಿಂದ ಲೈಸೆನ್ಸ್​​ ಪಡೆದಿರುವವರು ಅದರಲ್ಲಿ ಸೂಚಿಸಿರುವ ನಿಯಮಗಳಂತೆ ಮತ್ತು ಪ್ರತಿ ನಿತ್ಯದಂತೆ ತಮ್ಮ ವ್ಯವಹಾರ ನಿರ್ವಹಿಸಬಹುದು. ನಿಗದಿತ ಸಮಯಕ್ಕೆ ಬಂದ್ ಮಾಡಬೇಕು, 65 ವರ್ಷ ಮೇಲ್ಪಟ್ಟವರಿಗೆ, 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು.

ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು ಮತ್ತು ಪ್ರತಿಯೊಬ್ಬರು ತಮ್ಮ ಗ್ರಾಹಕರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಬಳಸಬೇಕು. ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಪ್ರತಿಯೊಬ್ಬರು ಮಾಸ್ಕ್ ಧರಿಸಿ ಒಳ ಬರುವಂತೆ ನಿಗಾ ವಹಿಸಬೇಕು. ಮಾಸ್ಕ್ ಧರಿಸದವರಿಗೆ ಉಚಿತವಾಗಿ ತಾವೇ ಮಾಸ್ಕ್ ನೀಡಿ ಎಚ್ಚರಿಕೆ ವಹಿಸಬೇಕೆಂದು ಹೊಟೇಲ್-ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಿದರು.

ಮಹಾನಗರ, ಪಟ್ಟಣಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆ ಸಲುವಾಗಿ ಗುಂಪು ಸೇರುವುದು, ಬೈಕ್ ರ್ಯಾಲಿ, ಪಾರ್ಟಿ ಮಾಡುವುದು, ಪಟಾಕಿ (ಹಸಿರು ಪಟಾಕಿ ಅಲ್ಲದ) ಸಿಡಿಸುವುದು ಮಂತಾದ ಯೋಜಿತ ಕಾರ್ಯಗಳನ್ನು ಜಿಲ್ಲೆಯಾದ್ಯಂತ ನಿರ್ಬಂಧಿಸಲಾಗಿದೆ. ಅಬಕಾರಿ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಿಗಾವಹಿಸಿ, ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದರು.

ಓದಿ: ಮೂರು ದಿನಗಳಲ್ಲಿ ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ

ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಹಾಗೂ ಸರ್ಕಾರದ ನಿರ್ದೇಶನವನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಲ್ಲಂಘಿಸುವವರ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.

ಫ್ಯಾಮಿಲಿ, ಫ್ರೆಂಡ್ಸ್ ನೆಪದಲ್ಲಿ ಯಾವುದೇ ರೀತಿಯ ಡಿಜೆ ಮ್ಯೂಜಿಕ್ ಕೇಳಿಬಂದರೆ ಮತ್ತು ಸಮಯ ಮೀರಿ ವ್ಯವಹಾರ ನಡೆಸಿದರೆ ಸ್ಥಳದಲ್ಲಿಯೇ ಹೊಟೇಲ್ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಸೀಜ್ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ನಗರ ಮತ್ತು ಹೊರ ವಲಯದ ಕೆಲವು ರೆಸ್ಟೋರೆಂಟ್, ಬಾರ್, ಕ್ಲಬ್‍ಗಳು ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಪ್ಯಾಕೇಜ್, ಕಾರ್ಯಕ್ರಮ ಆಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರಿಗೆ, ಸಾರ್ವಜನಿಕರಿಗೆ ಆಹ್ವಾನ ನೀಡುತ್ತಿರುವ ಮಾಹಿತಿ ಬಂದಿದೆ. ದಯವಿಟ್ಟು ಅಂಥ ಯೋಜನೆ, ಯೋಚನೆ, ಕಾರ್ಯಕ್ರಮಗಳ ತಯಾರಿ ಇದ್ದರೆ ಈಗಲೇ ಕೈಬಿಡಿ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.