ಹುಬ್ಬಳ್ಳಿ: ಉದ್ಯೋಗ, ವಾಣಿಜ್ಯ, ಶೈಕ್ಷಣಿಕ, ಮತ್ತಿತರ ಕಾರ್ಯ ನಿಮಿತ್ತ ಮೇಲಿಂದ ಮೇಲೆ ಮತ್ತು ತಿಂಗಳುಗಟ್ಟಲೇ ನಿತ್ಯವೂ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ವತಿಯಿಂದ ರಿಯಾಯಿತಿ ದರದಲ್ಲಿ ದಿನದ ಮತ್ತು ಮಾಸಿಕ ಬಸ್ ಪಾಸ್ಗಳನ್ನು ವಿತರಿಸಲಾಗುತ್ತದೆ.
ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ನಿಗದಿಪಡಿಸಲಾಗಿರುವ ಪ್ರಯಾಣ ದರ ರಿಯಾಯಿತಿ ಬಸ್ ಪಾಸ್ ದರ ಹಾಗೂ ಉಳಿತಾಯ ಮೊತ್ತದ ವಿವರಗಳು ಈ ರೀತಿ ಇವೆ.
ರಿಯಾಯಿತಿ ಪಾಸುಗಳ ಬಳಕೆಯಿಂದ ಪ್ರಯಾಣ ದರದಲ್ಲಿ ಬಹಳಷ್ಟು ಹಣ ಉಳಿತಾಯವಾಗಲಿದೆ. ಪ್ರತಿ ಸಲ ಪ್ರಯಾಣದ ಸಮಯದಲ್ಲಿ ನಗದು ಹಣ ತೆಗೆದುಕೊಂಡು ಹೋಗುವುದನ್ನು ಮತ್ತು ನಿಗದಿತ ಮೊತ್ತ ನೀಡುವಲ್ಲಿ ಎದುರಾಗುವ ಚಿಲ್ಲರೆ ಸಮಸ್ಯೆ ಬಗೆಹರಿಯಲಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.