ಧಾರವಾಡ: ನಗರದ ಸಂಚಾರಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಕೊರೊನಾದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದರು. ಕರ್ತವ್ಯಕ್ಕೆ ಹಾಜರಾದ ಇಬ್ಬರು ಕೊರೊನಾ ವಾರಿಯರ್ಸ್ಗೆ ಸಹೋದ್ಯೋಗಿಗಳು ಶಾಲು ಹೊದಿಸಿ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ವಾರಿಯರ್ಸ್ ಆದ ಬಸವರಾಜ ದೊಂಬರಕೊಪ್ಪ ಹಾಗೂ ಮಂಜುಳಾ ಬಡಿಗೇರ ಸೋಂಕಿಗೆ ತುತ್ತಾಗಿದ್ದರು. ಹಾಗಾಗಿ ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕೊರೊನಾ ವೈರಸ್ ವಿರುದ್ಧ ಹೋರಾಡಿ ಇಬ್ಬರು ಪೊಲೀಸ್ ಸಿಬ್ಬಂದಿ ಗುಣಮುಖರಾಗಿ ಕೆಲಸಕ್ಕೆ ಹಾಜರಾದರು. ಅವರಿಗೆ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸುವ ಮೂಲಕ ಠಾಣೆಗೆ ಸ್ವಾಗತಿಸಿಕೊಂಡಿದ್ದಾರೆ.