ETV Bharat / state

ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿ ಕೋಟಿ ಕೋಟಿ ಲಪಟಾಯಿಸಿದ ಭೂಪ ! - bilder Cheat people at hubli

ದಿನ ಬೆಳಗಾದ್ರೆ ಸಾಕು ಒಂದಲ್ಲ ಒಂದು ಹೊಸ ಕಂಪನಿಗಳು ಜನರಿಗೆ ಮೋಸ ಮಾಡಿ, ಮಂಕು ಬೂದಿ ಎರಚುವುದನ್ನು ನಾವೆಲ್ಲ ನೋಡಿರುತ್ತೀವಿ. ಈಗ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿರುವ ಬಿಲ್ಡರ್​ವೊಬ್ಬರು ಕೋಟಿ ಕೋಟಿ ಹಣವನ್ನ ಪಡೆದು ಜನರನ್ನು ವಂಚಿಸಿದ್ದಾರೆ.

Crores of rupees get by builder
ಬಿಲ್ಡರ್​ನಿಂದ ಮೋಸ ಹೋದ ಹುಬ್ಬಳ್ಳಿ ಜನತೆ
author img

By

Published : Jan 25, 2021, 8:37 AM IST

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದಲ್ಲಿರುವ ಸೆಂಟ್ರಲ್ ಮಾಲ್ ವಾಣಿಜ್ಯ ಮಳಿಗೆ ಕಟ್ಟಡವನ್ನ ಹರಾಜು ಹಾಕುವುದಾಗಿ ಕೆಎಸ್​ಎಫ್​ಸಿಯಿಂದ ಜಾಹೀರಾತು ನೀಡಲಾಗಿತ್ತು. ಈ ಜಾಹೀರಾತನ್ನು ನೋಡಿದ 200ಕ್ಕೂ ಹೆಚ್ಚು ಜನರು ಇದೀಗ ಬೀದಿಗೆ ಬಂದಿದ್ದಾರೆ. ಇವರೆಲ್ಲರು 2010-12 ರಲ್ಲಿ ಸೆಂಟ್ರಲ್ ಮಾಲ್ ವಾಣಿಜ್ಯ ಮಳಿಗೆ ಕಟ್ಟಡದ ಮಾಲೀಕ ವಿಜಯ ಕಬಾಡೆ ಬೀಸಿದ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ.

ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿ ಕೋಟಿ ಕೋಟಿ ಲಪಟಾಯಿಸಿದ ಬಿಲ್ಡರ್​

ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿ ವಿಜಯ ಕಬಾಡೆ ಅಂದು ಎರಡು ನೂರು ರೂಪಾಯಿ ಬಾಂಡ್ ಮೇಲೆ ಒಪ್ಪಂದ ಮಾಡಿಕೊಂಡು ಹಣ ವಸೂಲಿ ಮಾಡಿದ್ದರು. 200ಕ್ಕೂ ಹೆಚ್ಚು ಜನರಿಂದ 20 ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದರು. ಇನ್ನು ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇನ್​ಸ್ಟಾಲ್ ಮೆಂಟ್ ಮೇಲೆ ಆತ ಜನರಿಂದ ಹಣ ವಸೂಲಿ ಮಾಡಿದ್ದ. ಆದ್ರೆ ಇವತ್ತಿಗೂ ಹಣ ಕೊಟ್ಟವರಿಗೆ ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿಕೊಟ್ಟಿಲ್ಲ. ಆದ್ರೆ ಆ ಮಳಿಗೆಗಳೇ ಇಂದು ಹರಾಜಿಗೆ ಬಂದಿರುವುದರಿಂದ ಹಣ ಕಟ್ಟಿದವರು ಈಗ ಶಾಕ್ ಆಗಿದ್ದಾರೆ‌.

ಓದಿ:ಯೂ-ಟರ್ನ್​ ವೇಳೆ ಅಪಘಾತ: ಬಳ್ಳಾರಿಯಲ್ಲಿ ವ್ಯಕ್ತಿ ಸಾವು

ಮುಂದಿನ ಬದುಕಿಗೆ ಆಸರೆ ಆಗುತ್ತೆ ಅಂತಾ ಈ ಬಿಲ್ಡರ್ ನಂಬಿ ಜನರು ಅಂದು ವಾಣಿಜ್ಯ ಮಳಿಗೆಗಳಿಗಾಗಿ ಹಣ ಕೊಟ್ಟಿದ್ದರು. ಆದ್ರೆ ಬಿಲ್ಡರ್ ಮೊಸದ ಬಲೆಗೆ ಸಿಲುಕಿದ ಇವರು ಇಂದು ಬೀದಿಗೆ ಬಂದಿದ್ದಾರೆ. ಜನರಿಂದ 2010-12 ರಲ್ಲಿ 20 ಕೋಟಿಗೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ. ದುರಂತ ಅಂದ್ರೆ ಇಷ್ಟೆಲ್ಲ ಜನರು ಹಣ ಹೂಡಿಕೆ ಮಾಡಿರುವ ಸಂಗತಿ ಕೆಎಸ್​ಎಫ್​ಸಿಗೆ‌ ಗೊತ್ತಿದ್ರೂ, ಬಿಲ್ಡರ್ ಸಾಲ ಮರು ಪಾವತಿ ಮಾಡದಿದ್ದಾಗ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅಧಿಕಾರಿಗಳು ವಾಣಿಜ್ಯ ಮಳಿಗೆ ಕಟ್ಟಡವನ್ನ ಹರಾಜಿಗೆ ಕರೆದಿದ್ದಾರೆ. ಕೆಎಸ್​ಎಫ್​ಸಿ ಅಧಿಕಾರಿಗಳು ಈ ವಾಣಿಜ್ಯ ಮಳಿಗೆ ಕಟ್ಟಡದ ಬಿಲ್ಡರ್ ಜೊತೆಗೆ ಶಾಮೀಲಾಗಿ ತಮಗೆ ಮೋಸ ಮಾಡುತ್ತಿದ್ದಾರೆಂದು ಜನರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.