ಧಾರವಾಡ : ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯ ನವಲಗುಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನ ಗುಡಿಸಾಗರ, ನಾಗನೂರು, ಸೋಟಕನಾಳ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನೂರಾರು ಎಕರೆಯ ಭತ್ತ, ಕಡಲೆ, ಜೋಳದ ಬೆಳೆಗಳು ನೆಲಕಚ್ಚಿವೆ.
ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿಯಾಗಿರುವುದರಿಂದ ರೈತರು ನಷ್ಟದ ಭೀತಿಯಲ್ಲಿದ್ದು, ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.