ಧಾರವಾಡ: ಜಿಲ್ಲೆಯ ಅಳ್ನಾವರದ ಹಿರೇಕೆರೆಯಲ್ಲಿ ಬುಧವಾರ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಈ ಕೆರೆಯು ಪಟ್ಟಣಕ್ಕೆ ಹತ್ತಿಕೊಂಡೆ ಇದ್ದು, ಇಲ್ಲಿ ಪ್ರತಿದಿನ ಜಾನುವಾರಗಳು ಮೇಯುತ್ತವೆ. ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ಮೊಸಳೆಯೊಂದು ಕೆರೆಯಲ್ಲಿ ಕಂಡುಬಂದಿತ್ತು. ಆಗಲೂ ಕೂಡ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದ್ರೆ ಪ್ರಯೋಜನವಾಗಲಿಲ್ಲ.
ಈಗ ಕೆರೆಯಲ್ಲಿ ಮತ್ತೊಮ್ಮೆ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈಗಲಾದ್ರೂ ಸಹ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದಕ್ಕೆ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.