ETV Bharat / state

ಧಾರವಾಡ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಪೊಲೀಸ್ ಖೆಡ್ಡಾ.. ಇಬ್ಬರು ಅಂದರ್​ - ಈಟಿವಿ ಭಾರತ್ ಕನ್ನಡ ಸುದ್ದಿ

Dharwad crime: ಯುವತಿಯರಿಗೆ ವಿಚಿತ್ರ ಧ್ವನಿ ಮೂಲಕ ಹೆದರಿಸಿದ್ದ ಯುವಕರು ಶಹರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಪೊಲೀಸ್ ಖೆಡ್ಡಾ

author img

By

Published : Jul 23, 2023, 10:28 PM IST

ಧಾರವಾಡ: ಬೈಕ್ ಮೇಲೆ‌ ಹೋಗುತ್ತ ಯುವತಿಯರನ್ನು ಛೇಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಹೋಗಿ ಮೂವರು ಯುವಕರು ಸಿಕ್ಕಿಬಿದ್ದಿದ್ದಾರೆ. ಅದೇ ಯುವಕನ ವಿಡಿಯೋ ಟ್ವಿಟ್ಟರ್​ಗೆ ಹಾಕಿ ಪೊಲೀಸರು ಬುದ್ಧಿ ಕಲಿಸಿದ್ದಾರೆ.

ಬೈಕ್ ‌ಮೇಲೆ ಹೋಗುತ್ತಲೇ ವಿಚಿತ್ರ ಧ್ವನಿ ಮಾಡಿ ಯುವತಿಯರನ್ನು ಯುವಕರು ಹೆದರಿಸಿದ್ದರು‌. ಅದನ್ನು ಹಿಂದಿನಿಂದ ಮತ್ತೊಂದು ಬೈಕ್‌ನಲ್ಲಿ ಇಬ್ಬರು ಗೆಳೆಯರು ವಿಡಿಯೋ ಮಾಡಿದ್ದರು. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು.

ಶಹರ ಠಾಣೆ ಪೊಲೀಸರ ಕ್ರಮಕ್ಕೆ ಮೆಚ್ಚುಗೆ : ಯುವಕನ ಸೋಶಿಯಲ್​ ಮೀಡಿಯಾ ಶೋಕಿಗೆ ಪೊಲೀಸರು ಟಕ್ಕರ್ ಕೊಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವಕರ ಮೇಲೆ‌ ಕ್ರಮ ಕೈಗೊಂಡು ಬೈಕ್ ಸೀಜ್ ಮಾಡಿ, ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಆತನ ವಿಡಿಯೋ ಮಾಡಿ ಪೊಲೀಸರು ಅಪ್ಲೋ​ಡ್ ಮಾಡಿದ್ದಾರೆ. ಶಹರ ಠಾಣೆ ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅಧಿಕೃತ ಟ್ವಿಟರ್‌ನಲ್ಲಿ ಅಪ್ಲೋ​ಡ್ ಮಾಡಿದ ಪೊಲೀಸರು: ವೈರಲ್ ಆಗುವ ರೀತಿಯಲ್ಲಿಯೇ BEFORE, AFTER ಎಫೆಕ್ಟ್ ಹಾಕಿದ ಪೊಲೀಸರು ಯುವಕನ ಹುಚ್ಚಾಟ ಮತ್ತು ಕೇಸ್ ಹಾಕಿದ ಫೋಟೋ ಸೇರಿಸಿ ವಿಡಿಯೋ ಮಾಡಿ ಅದನ್ನು ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಅಪ್ಲೋ​ಡ್ ಮಾಡಿದ್ದಾರೆ.

ಅಹ್ಮದ ಖಾತರ್, ಜುನೇದ ಸೌದಾಗರ, ಮನ್ಸೂರ ಶಿರಹಟ್ಟಿ ಬಂಧಿತರು. ಓರ್ವ ಛೇಡಿಸಿದ್ರೆ. ಇನ್ನಿಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದರು.

ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ: ಇನ್ನೊಂದೆಡೆ ಶಿಕ್ಷಣ, ಕೆಲಸ ನಿಮಿತ್ತ ರಸ್ತೆಯಲ್ಲಿ ಸಂಚರಿಸುವ ಯುವತಿಯರನ್ನು ಕೆಲವು ಪುಂಡ ಯುವಕರು ಕಾಡಿಸುವುದು, ಹಿಂಬಾಲಿಸುವುದು ಅತಿಯಾಗುತ್ತಿದೆ. ಯುವತಿಯರನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುವುದಲ್ಲದೇ, ಲೈಂಗಿಕ ಕಿರುಕುಳ ನೀಡುವ ಆರೋಪಗಳೂ ಕೇಳಿಬರುತ್ತಿವೆ. ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಪೊಲೀಸರು (ಜುಲೈ 18-2023) ಓರ್ವ ಯುವಕನನ್ನು ಬಂಧಿಸಿದ್ದರು. ದಾವಣಗೆರೆ ನಿವಾಸಿ ಖಾದೀರ್ ಖಾನ್ (20) ಎಂಬಾತ ಬಂಧಿತ ಆರೋಪಿ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಹಿಂದೂ ಯುವಕನನ್ನು ಮದುವೆಯಾಗಿ ತನ್ನ ದೇಶಕ್ಕೆ ಕರೆದೊಯ್ದ ಬಾಂಗ್ಲಾ ಹುಡುಗಿ: ಪಾಕ್​ನ ಸೀಮಾ ಹೈದರ್ ಪ್ರಕರಣ ಹೋಲುವ ಘಟನೆ...

"ನಗರದ ಎಂಸಿಸಿಬಿ ಬ್ಲಾಕ್ ಮಾರ್ಗವಾಗಿ ತೆರಳುತ್ತಿದ್ದಾಗ (ಜುಲೈ 05 ರಂದು) ಬೈಕ್​ನಲ್ಲಿ ಆಗಮಿಸಿದ್ದ ಖಾದೀರ್ ಖಾನ್ ನನ್ನನ್ನು ಹಿಂಬಾಲಿಸಿ, ಅಶ್ಲೀಲ ಪದಗಳಿಂದ ನಿಂದಿಸಿದ್ದ. ಜುಲೈ 16ರಂದು ಅದೇ ಆರೋಪಿ ಮತ್ತೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ" ಎಂದು ಓರ್ವ ಯುವತಿ ದೂರಿನಲ್ಲಿ ತಿಳಿಸಿದ್ದರು.

ಹಲವು ದಿನಗಳಿಂದ ಹಲವು ವಿದ್ಯಾರ್ಥಿನಿಯರಿಗೆ ಚುಡಾಯಿಸಿರುವುದು, ಬೈಕ್‌ನಲ್ಲಿ ಹಿಂಬದಿಯಿಂದ ಬಂದು ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ವಿಚಾರವನ್ನು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ದಾವಣಗೆರೆ: ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿಡಿಗೇಡಿ ಯುವಕ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.