ಹುಬ್ಬಳ್ಳಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೀಗ ತೀವ್ರ ಜ್ವರದಿಂದ ಬಳಲುತ್ತಿದ್ದ ಪೂರ್ವ ಸಂಚಾರ ಠಾಣೆ ಕಾನ್ಸ್‌ಟೇಬಲ್ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಕಾರವಾರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪೂರ್ವ ಸಂಚಾರ ಠಾಣೆಯ 39 ವರ್ಷದ ಕಾನ್ಸ್‌ಟೇಬಲ್‌ವೊಬ್ಬರು ಕಳೆದ 3-4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಇವರನ್ನು ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಈಗಾಗಲೇ ಕಾನ್ಸ್‌ಟೇಬಲ್ ಗೆ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತ ಜೊತೆ ಸಂಪರ್ಕ ಹೊಂದಿದ್ದ ಠಾಣೆಯ ಸಿಬ್ಬಂದಿ ಹಾಗೂ ಕ್ವಾರ್ಟರ್ಸ್‌ನಲ್ಲಿನ ನಿವಾಸಿಗಳಿಗೆ ಆತಂಕ ಮೂಡಿದೆ.