ಹುಬ್ಬಳ್ಳಿ: ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉತ್ಸಾಹದಲ್ಲಿದ್ದ ಯುವ ಸಮೂಹ ಈಗ ಪರಿಸರ ಸ್ವಚ್ಛತೆ ಮತ್ತು ರಕ್ಷಣೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಕೊರೊನಾ ತಡೆಗೆ ಲಾಕ್ಡೌನ್ ಆದ ವೇಳೆ ವಾಹನ ಸಂಚಾರ ಕೊಂಚ ಮಟ್ಟಿಗೆ ತಗ್ಗಿ, ಪರಿಸರ ಮಾಲಿನ್ಯ ಕಡಿಮೆಯಾಗಿತ್ತು. ಆನ್ಲಾಕ್ ಆಗಿದ್ದೇ ತಡ ವಾಹನ ಸಂಚಾರ ಹೆಚ್ಚಾಗಿದ್ದು, ಪರಿಸರ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಯುವ ಉತ್ಸಾಹಿಗಳ ತಂಡ ಕುಬೇರ ಚಾರಿಟೇಬಲ್ ಟ್ರಸ್ಟ್ ಹಾಗೂ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಹೆಸರಿನಲ್ಲಿ ಅಮರಗೋಳದ ಬಸ್ ನಿಲ್ದಾಣ ಗೋಡೆಗಳಿಗೆ ಸ್ವಯಂ ಪ್ರೇರಿತರಾಗಿ ಬಣ್ಣ ಬಳೆಯುವ ಮೂಲಕ ಪರಿಸರ ರಕ್ಷಣೆ, ಸ್ವಚ್ಛತೆ ಜೊತೆಗೆ ಕೋವಿಡ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬೇಡಿಕೆ: ಸರ್ಕಾರದಿಂದ ಬೆಣ್ಣೆ ನಗರಿಗೆ ಸದ್ಯದಲ್ಲೇ ಸಿಹಿ ಸುದ್ದಿ?
ಎಲ್ಲೆಂದರಲ್ಲಿ ಉಗುಳುವುದು ಹಾಗೂ ಬೇಕಾಬಿಟ್ಟಿಯಾಗಿ ಪರಿಸರ ಮಾಲಿನ್ಯ ಮಾಡುವ ಕೆಲಸಕ್ಕೆ ಜನರು ಕೈ ಹಾಕಬಾರದು ಎಂಬುದು ಇವರ ಸದುದ್ದೇಶವಾಗಿದೆ.