ETV Bharat / state

ಕುಂದಗೋಳ ವಿಧಾನಸಭಾ ಉಪ ಚುನಾವಣೆಗೆ ಕ್ಷಣಗಣನೆ... ಆಯೋಗದಿಂದ ಸರ್ವ ಸಿದ್ಧತೆ!

ಕುಂದಗೋಳ ವಿಧಾನಸಭಾ ಉಪ ಚುನಾವಣೆಗೆ ಕ್ಷಣಗಣನೆ-ಯಾವುದೇ ಅಡ್ಡಿ ಆತಂಕ ಇಲ್ಲದೆ ಮತದಾನ ನಡೆಸುವ ನಿಟ್ಟಿನಲ್ಲಿ 54 ಸೂಕ್ಷ್ಮ ವೀಕ್ಷಕರನ್ನು ನಿಯೋಜನೆ-ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ.

author img

By

Published : May 19, 2019, 6:29 AM IST

ಕುಂದಗೋಳ ವಿಧಾನಸಭಾ ಉಪ ಚುನಾವಣೆ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ‌. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಪೂರಕ ಕ್ರಮ ಕೈಗೊಂಡಿದ್ದು, ಒಟ್ಟು 214 ಮತಗಟ್ಟೆಗಳನ್ನು ನಿರ್ಮಾಣ ಮಾಡಿದ್ದು, ಇದರಲ್ಲಿ 33 ಸೂಕ್ಷ್ಮ,38 ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.

ಚುನಾವಣೆಗಾಗಿ 916 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದರಲ್ಲಿ 2 ಸಖೀ ಮತಗಟ್ಟೆ, 54 ಸೂಕ್ಷ್ಮ ವೀಕ್ಷಕರ ನೇಮಕ, 157 ವಿವಿ ಪ್ಯಾಟ್‌ ಬಳಕೆ ಮಾಡಲಾಗುತ್ತಿದೆ.

ಸೂಕ್ಷ್ಮ ವೀಕ್ಷಕರ ನೇಮಕ:

ಯಾವುದೇ ಅಡ್ಡಿ ಆತಂಕ ಇಲ್ಲದೆ ಮತದಾನ ನಡೆಸುವ ನಿಟ್ಟಿನಲ್ಲಿ 54 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಂಖ್ಯೆ 35 ಮತ್ತು 37 ಎರಡು ಸಖೀ ಮತಗಟ್ಟೆ ಮಾಡಲಾಗಿದ್ದು, ಅಂಬೇಡ್ಕರ್‌ ನಗರದಲ್ಲಿರುವ ಮತಗಟ್ಟೆ ಸಂಖ್ಯೆ 45ರಲ್ಲಿ ಒಂದು ವಿಶೇಷಚೇತನರ ಮತಗಟ್ಟೆ ಮಾಡಲಾಗಿದೆ. ಮತಗಟ್ಟೆಗೆ ಬರಲಾಗದ ವಿಶೇಷಚೇತನರು ಮತ್ತು ವಯೋವೃದ್ಧರನ್ನು ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುವ ಸ್ವಯಂ ಸೇವಕರಿಗೆ 50 ರೂ. ನೀಡುವ ಮೂಲಕ ಮತದಾನ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿದೆ.

18 ಸೆಕ್ಟರ್ ಅಧಿಕಾರಿಗಳ ಕಾರ್ಯನಿರ್ವಹಣೆ:

ಪ್ರತಿ ಮತಗಟ್ಟೆಗೂ ಅಗತ್ಯ ಇವಿಎಂ ಮತ್ತು ವಿವಿ ಪ್ಯಾಟ್‌ ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ತೊಂದರೆ ಉಂಟಾದರೆ ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 44 ಇವಿಎಂ, 157 ವಿವಿಪ್ಯಾಟ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ, 10-15 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್‌ ಅಧಿಕಾರಿ ನಿಯೋಜನೆ ಮಾಡಲಾಗಿದ್ದು, ಒಟ್ಟು 18 ಸೆಕ್ಟರ್‌ ಅಧಿಕಾರಿಗಳು ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಸಿಬ್ಬಂದಿಗೆ ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ‌.

ಕ್ಷೇತ್ರದ ಮತದಾರರ ಸಂಖ್ಯೆ:

  • ಒಟ್ಟು ಮತದಾರರು: 1,89,437
  • ಪುರುಷ ಮತದಾರರು: 97,526
  • ಮಹಿಳಾ ಮತದಾರರು: 91,907
  • ಹೊಸ ಮತದಾರರು: 4,705
  • ಮತಕೇಂದ್ರಗಳು: 214
  • ಸೂಕ್ಷ್ಮ ಮತಗಟ್ಟೆಗಳು: 25

ಕುಂದಗೋಳ ಕಣದಲ್ಲಿರುವ ಅಭ್ಯರ್ಥಿಗಳು:

  1. ಕುಸುಮಾವತಿ ಶಿವಳ್ಳಿ, (ಕಾಂಗ್ರೆಸ್)
  2. ಎಸ್.ಐ. ಚಿಕ್ಕನಗೌಡ್ರ, (ಬಿಜೆಪಿ)
  3. ಭಂಡೀವಾಡ ಶೆಟ್ಟೆಪ್ಪ, (ಪಕ್ಷೇತರ)
  4. ತುಳಸಪ್ಪ ದಾಸರ, (ಪಕ್ಷೇತರ)
  5. ರಾಜು ನಾಯಕವಾದಿ, (ಪಕ್ಷೇತರ)
  6. ಶ್ರೀಮತಿ ಗೋನಿ ಶೈಲಾ ಸುರೇಶ್, (ಪಕ್ಷೇತರ)
  7. ಸಿದ್ದಪ್ಪ ಸತ್ಯಪ್ಪ ಗೋಡಿ, (ಪಕ್ಷೇತರ)
  8. ಸೋಮಣ್ಣ ಮೇಟಿ, (ಪಕ್ಷೇತರ)

ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ:

ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್​ನ ಕುಸುಮಾವತಿ ಶಿವಳ್ಳಿ ವಿರುದ್ಧ ಬಿಜೆಪಿಯ ಚಿಕ್ಕನಗೌಡ್ರ ಅವರು ತೀವ್ರ ಸ್ಪರ್ಧೆ ನೀಡಿದ್ದಾರೆ.

ಎಡಗೈ ಮಧ್ಯದ ಬೆರಳಿಗೆ ಶಾಹಿ:

ಲೋಕಸಭೆ ಚುನಾವಣೆಯ ವೇಳೆ ಮತದಾನ ಮಾಡುವ ವ್ಯಕ್ತಿಗಳ ಎಡಗೈ ತೋರು ಬೆರಳಿಗೆ ಶಾಹಿ ಹಾಕಲಾಗಿತ್ತು. ಈಗ ವಿಧಾನಸಭೆ ಉಪ ಚುನಾವಣೆಗೆ ಎಡಗೈ ಮಧ್ಯದ ಬೆರಳಿಗೆ ಶಾಹಿಯನ್ನು ಹಾಕಲಾಗುತ್ತಿದೆ.‌

ಪೊಲೀಸ್ ಬಿಗಿ ಭದ್ರತೆ:

ಕುಂದಗೋಳ ಉಪಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು 2 ಡಿವೈಎಸ್‌ಪಿ, 6 ಪಿಐ, 17 ಪಿಎಸ್‌ಐ, 41 ಎಎಸ್‌ಐ, 114 ಎಚ್‌ಸಿ, 144 ಪಿಸಿ, 260 ಹೋಮ್‌ ಗಾರ್ಡ್‌ ಹಾಗೂ 272 ಅರೆ ಸೇನಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

Intro:ಹುಬ್ಬಳ್ಳಿ-01
ಕುಂದಗೋಳ ವಿಧಾನಸಭೆ ಉಪಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6ರವರೆಗೆ ಮತದಾನಕ್ಕೆ ನಡೆಯಲಿದೆ‌.
ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಅಗತ್ಯ ಪೂರಕ ಕ್ರಮ ಕೈಗೊಂಡಿದ್ದು, ಒಟ್ಟು 214 ಮತಗಟ್ಟೆಗಳನ್ನು ನಿರ್ಮಾಣ ಮಾಡಿದ್ದು, ಇದರಲ್ಲಿ 33 ಸೂಕ್ಷ್ಮ,38 ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಚುನಾವಣೆಗಾಗಿ 916 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು. 2 ಸಖೀ ಮತಗಟ್ಟೆ, 54 ಸೂಕ್ಷ್ಮ ವೀಕ್ಷಕರ ನೇಮಕ, 157 ವಿವಿ ಪ್ಯಾಟ್‌ ಬಳಕೆ ಮಾಡಲಾಗುತ್ತಿದೆ.

928 ಸಿಬ್ಬಂದಿಗೆ ಚುನಾವಣಾ ಕೆಲಸ:
ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆಸಲು ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ಒಟ್ಟು 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಈ ಪೈಕಿ 33 ಸೂಕ್ಷ್ಮ ಮತ್ತು 38 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಪೊಲೀಸ್‌ ಪೇದೆ, ನಾಲ್ಕು ಜನ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಒಟ್ಟು 968 ಸಿಬ್ಬಂದಿ ನಾಳೆ ನಡೆಯುವ ಚುನಾವಣೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಸೂಕ್ಷ್ಮ ವೀಕ್ಷಕರ ನೇಮಕ: ಯಾವುದೇ ಅಡ್ಡಿ ಆತಂಕ ಇಲ್ಲದೆ ಮತದಾನ ನಡೆಸುವ ನಿಟ್ಟಿನಲ್ಲಿ 54 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಂಖ್ಯೆ 35 ಮತ್ತು 37 ಎರಡು ಸಖೀ ಮತಗಟ್ಟೆ ಮಾಡಲಾಗಿದ್ದು, ಅಂಬೇಡ್ಕರ್‌ ನಗರದಲ್ಲಿರುವ ಮತಗಟ್ಟೆ ಸಂಖ್ಯೆ 45ರಲ್ಲಿ ಒಂದು ವಿಶೇಷಚೇತನರ ಮತಗಟ್ಟೆ ಮಾಡಲಾಗಿದೆ. ಮತಗಟ್ಟೆಗೆ ಬರಲಾಗದ ವಿಶೆಷಚೇತನರು ಮತ್ತು ವಯೋವೃದ್ಧರನ್ನು ಮತಗಟ್ಟೆ ತಂದು ಮತದಾನ ಮಾಡಿಸುವ ಸ್ವಯಂ ಸೇವಕರಿಗೆ 50 ರೂ. ನೀಡುವ ಮೂಲಕ ಮತದಾನ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿದೆ.

೧೮ ಸೆಕ್ಟರ್ ಅಧಿಕಾರಿಗಳ ಕಾರ್ಯನಿರ್ವಹಣೆ:
ಪ್ರತಿ ಮತಗಟ್ಟೆಗೂ ವಿವಿ ಪ್ಯಾಟ್‌
ಪ್ರತಿ ಮತಗಟ್ಟೆಗೂ ಅಗತ್ಯ ಇವಿಎಂ ಮತ್ತು ವಿವಿ ಪ್ಯಾಟ್‌ ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ತೊಂದರೆ ಉಂಟಾದರೆ ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 44 ಇವಿಎಂ, 157 ವಿವಿಪ್ಯಾಟ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ, 10-15 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್‌ ಅಧಿಕಾರಿ ನಿಯೋಜನೆ ಮಾಡಲಾಗಿದ್ದು, ಒಟ್ಟು 18 ಸೆಕ್ಟರ್‌ ಅಧಿಕಾರಿಗಳು ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಸಿಬ್ಬಂದಿಗೆ ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ‌.

ಕ್ಷೇತ್ರದ ಮತದಾರರ ಸಂಖ್ಯೆ:

ಒಟ್ಟು ಮತದಾರರು: 1,89,437
ಪುರುಷ ಮತದಾರರು: 97,526
ಮಹಿಳಾ ಮತದಾರರು: 91,907
ಹೊಸ ಮತದಾರರು: 4,705
ಮತಕೇಂದ್ರಗಳು: 214
ಸೂಕ್ಷ್ಮ ಮತಗಟ್ಟೆಗಳು: 25

ಕುಂದಗೋಳ ಕಣದಲ್ಲಿರುವ 8 ಅಭ್ಯರ್ಥಿಗಳು:

1) ಕುಸುಮಾವತಿ ಶಿವಳ್ಳಿ, (ಕಾಂಗ್ರೆಸ್)
2) ಎಸ್.ಐ. ಚಿಕ್ಕನಗೌಡ್ರ, (ಬಿಜೆಪಿ)
3) ಭಂಡೀವಾಡ ಶೆಟ್ಟೆಪ್ಪ, (ಪಕ್ಷೇತರ)
4) ತುಳಸಪ್ಪ ದಾಸರ, (ಪಕ್ಷೇತರ)
5) ರಾಜು ನಾಯಕವಾದಿ, (ಪಕ್ಷೇತರ)
6) ಶ್ರೀಮತಿ ಗೋನಿ ಶೈಲಾ ಸುರೇಶ್, (ಪಕ್ಷೇತರ)
7) ಸಿದ್ದಪ್ಪ ಸತ್ಯಪ್ಪ ಗೋಡಿ, (ಪಕ್ಷೇತರ)
8) ಸೋಮಣ್ಣ ಮೇಟಿ, (ಪಕ್ಷೇತರ)

ಬಿಜೆಪಿ- ಕಾಂಗ್ರೆಸ್ ನೇರಾನೇರ ಸ್ಪರ್ಧೆ:

ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್​ನ ಕುಸುಮಾವತಿ ಶಿವಳ್ಳಿ ವಿರುದ್ಧ ಬಿಜೆಪಿಯ ಚಿಕ್ಕನಗೌಡ್ರ ಅವರು ತೀವ್ರ ಸ್ಪರ್ಧೆ ನೀಡಿದ್ದಾರೆ.

ಎಡಗೈ ಮಧ್ಯದ ಬೆರಳಿಗೆ ಶಾಹಿ:
ಲೋಕಸಭೆ ಚುನಾವಣೆಯ ವೇಳೆ ಮತದಾನ ಮಾಡುವ ವ್ಯಕ್ತಿಗಳ ಎಡಗೈ ತೋರು ಬೆರಳಿಗೆ ಶಾಹಿ ಹಾಕಲಾಗಿತ್ತು. ಈಗ ವಿಧಾನಸಭೆ ಉಪಚುನಾವಣೆಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಸಾಧ್ಯವಾದ ಶಾಹಿಯನ್ನು ಹಾಕಲಾಗುತ್ತಿದೆ.‌

ಪೋಲಿಸ್ ಬಿಗಿ ಭದ್ರತೆ:
ಕುಂದಗೋಳ ಉಪಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು 2 ಡಿವೈಎಸ್‌ಪಿ, 6 ಪಿಐ, 17 ಪಿಎಸ್‌ಐ, 41 ಎಎಸ್‌ಐ, 114 ಎಚ್‌ಸಿ, 144 ಪಿಸಿ, 260 ಹೋಮ್‌ ಗಾರ್ಡ್‌ ಹಾಗೂ 272 ಅರೇ ಸೇನಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.