ETV Bharat / state

ಹು-ಧಾ ಮಹಾನಗರ ಪಾಲಿಕೆ ಗದ್ದುಗೆ ಯಾರಿಗೆ?.. ಮೇಯರ್-ಉಪಮೇಯರ್ ಆಯ್ಕೆಗೆ ಸಿದ್ಧತೆ.. - ಹು-ಧಾ ಮಹಾನಗರ ಪಾಲಿಕೆ ಚುನಾವಣೆ

ಇದರಲ್ಲಿ ಪಾಲಿಕೆ ವ್ಯಾಪ್ತಿಯ ಎಂಎಲ್​​​ಎಗಳು, ಎಂಎಲ್‌ಸಿಗಳು, ಎಂಪಿ ಕೂಡ ಮತ ಚಲಾವಣೆ ಮಾಡಬೇಕಿರೋದರಿಂದ ಪಾಲಿಕೆ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರ ಅಧಿಸೂಚನೆಗೆ ಕಾಯುತ್ತಿದ್ದಾರೆ..

hu-dh-municipality
ಹು-ಧಾ ಮಹಾನಗರ ಪಾಲಿಕೆ
author img

By

Published : Sep 14, 2021, 8:06 PM IST

ಹುಬ್ಬಳ್ಳಿ: ಕಳೆದೆರಡು ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರ ನಡೆಸಿಕೊಂಡು ಬಂದಿದ್ದ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾತ್ರ ಬಾಕಿ ಉಳಿದಿದೆ.

82 ವಾರ್ಡ್​​ಗಳ ಪೈಕಿ ಬಿಜೆಪಿ39, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3, ಪಕ್ಷೇತರ 6 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇವರಲ್ಲಿ ಯಾರಿಗೆ ಮೇಯರ್ ಪಟ್ಟ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮೇಯರ್ ಹಾಗೂ ಉಪ ಮೇಯರ್ ಚುನಾವಣಾ ಪ್ರಕ್ರಿಯೆಯು ಪ್ರಾದೇಶಿಕ ಆಯುಕ್ತರ ನಿರ್ದೇಶನದಲ್ಲಿ ನಡೆಯಲಿದೆ. ಆಯ್ಕೆಗೆ ದಿನಾಂಕ ಘೋಷಣೆ ಆಗಬೇಕಿದೆ.

ಹು-ಧಾ ಮಹಾನಗರ ಪಾಲಿಕೆ ಗದ್ದುಗೆ ಯಾರಿಗೆ?

ಇದಕ್ಕಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ‌. ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ ಮೇಲೆ ಕ್ರಮಬದ್ಧವಾಗಿ ನಾಮಪತ್ರಗಳ‌ ಸಲ್ಲಿಕೆ, ನಾಮಪತ್ರಗಳ ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಲಿದೆ‌.‌

ಇದರಲ್ಲಿ ಪಾಲಿಕೆ ವ್ಯಾಪ್ತಿಯ ಎಂಎಲ್​​​ಎಗಳು, ಎಂಎಲ್‌ಸಿಗಳು, ಎಂಪಿ ಕೂಡ ಮತ ಚಲಾವಣೆ ಮಾಡಬೇಕಿರೋದರಿಂದ ಪಾಲಿಕೆ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರ ಅಧಿಸೂಚನೆಗೆ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸಾಲ ಪಡೆದದ್ದು ₹14 ಲಕ್ಷ, ಬ್ಯಾಂಕ್ ಕೊಟ್ಟ ಲೆಕ್ಕ ₹95 ಲಕ್ಷ: ನೋಟಿಸ್ ಪಡೆದ ಗುಂಡ್ಲುಪೇಟೆ ರೈತ ಕಂಗಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.