ETV Bharat / state

ರಸ್ತೆ ಬದಿ ಬೇಕಾಬಿಟ್ಟಿ ಕಸ ಎಸೆದ ವ್ಯಕ್ತಿಯಿಂದಲೇ ಸ್ವಚ್ಛಗೊಳಿಸಿದ ಪಾಲಿಕೆ ಸಿಬ್ಬಂದಿ - ರಸ್ತೆ ಬದಿ ಬೇಕಾಬಿಟ್ಟಿ ಕಸ ಎಸೆದ ವ್ಯಕ್ತಿ

ರಸ್ತೆ ಬದಿ ಬೇಜವಾಬ್ದಾರಿಯಿಂದ ಕಸ ಎಸೆದ ವ್ಯಕ್ತಿಯಿಂದಲೇ ಆ ಕಸ ತೆಗೆಸುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಎಚ್ಚರಿಕೆ ನೀಡಿದರು.

garbage
ಎಸೆದವನಿಂದಲೇ ಕಸ ತೆಗೆಸಿದ ಪಾಲಿಕೆ ಸಿಬ್ಬಂದಿ
author img

By

Published : Nov 18, 2022, 10:13 AM IST

ಹುಬ್ಬಳ್ಳಿ: ಅವಳಿ ನಗರವನ್ನು ಸ್ಮಾರ್ಟ್ ಮಾಡಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಕಷ್ಟು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಪ್ರಯೋಗಗಳನ್ನು ಕೂಡ ಮಾಡಲಾಗುತ್ತಿದೆ. ಆದರೆ, ಕೆಲವರು ನಿರ್ಲಕ್ಷ್ಯವಹಿಸುತ್ತಿದ್ದು, ಅಂಗಡಿಗಳ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

  • ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾಡ೯ ನಂ: 47ರ ವ್ಯಾಫ್ತಿಯ ಪಾನ್-ಶಾಪ್ ಅಂಗಡಿ ದವರು ರಸ್ತೆಬದಿಯಲ್ಲಿ ಕಸ ಚೆಲ್ಲಿದ್ದರಿಂದ ಕಸವನ್ನು ಅಂಗಡಿ ಮಾಲಕರಿಂದಲೇ ತೆಗೆಸಲಾಯಿತು ಹಾಗೂ ಮತ್ತೆ ಕಸ ಎಸೆಯದಂತೆ ಎಚ್ಚರಿಕೆ ನೀಡಿಲಾಯಿತು. pic.twitter.com/ox7hWTADBI

    — Hubballi-Dharwad Municipal Corporation (@HdmcHubliDwd) November 17, 2022 " class="align-text-top noRightClick twitterSection" data=" ">

ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂಬರ್​ 47ರ ವ್ಯಾಪ್ತಿಯಲ್ಲಿರುವ ಪಾನ್​ಶಾಪ್ ಅಂಗಡಿಯವರು ರಸ್ತೆ ಬದಿಯಲ್ಲಿ ಕಸ ಚೆಲ್ಲಿದ್ದರು. ಈ ಅವ್ಯವಸ್ಥೆಯನ್ನು ಅರಿತ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಸವನ್ನು ಅಂಗಡಿ ಮಾಲೀಕರಿಂದಲೇ ಸ್ವಚ್ಛಗೊಳಿಸುವ ಮೂಲಕ ಮತ್ತೆ ಕಸ ಎಸೆಯದಂತೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಇದನ್ನೂ ಓದಿ: ದಾವಣಗೆರೆ: ಬೀದಿ ಬದಿ ಕಸ ಹಾಕುವವರನ್ನು ತರಾಟೆಗೆ ತೆಗೆದುಕೊಂಡ ಯುವಕರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಜನರಿಗೆ ಎಷ್ಟೇ ಜಾಗೃತಿ, ಎಚ್ಚರಿಕೆ ನೀಡಿದರೂ ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿ ಬಿಟ್ಟಿಲ್ಲ. ಕೆಲವೇ ಮಂದಿಯ ಇಂಥ ಚಾಳಿಯಿಂದ ಇಡೀ ನಗರದ ನೈರ್ಮಲ್ಯ, ಜನಸಾಮಾನ್ಯರ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಇನ್ನಾದರೂ ಜನರು ಎಚ್ಚೆತ್ತುಕೊಂಡು ತಮ್ಮ ಮನೆಯಂತೆ ಸಾರ್ವಜನಿಕ ಸ್ಥಳಗಳ ಬಗ್ಗೆ ಕಾಳಜಿ ವಹಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.