ಹುಬ್ಬಳ್ಳಿ : ನಗರ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ, ಧಾರವಾಡ ನಗರ ಸಾರಿಗೆ ವಿಭಾಗವು ಬಿಆರ್‌ಟಿಎಸ್ ಘಟಕದಲ್ಲಿ ಧಾರವಾಡ ಜಿಲ್ಲಾ ಆಡಳಿತದ ನಿರ್ದೇಶನದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಘಟಕದ 65 ಆಡಳಿತ, ತಾಂತ್ರಿಕ ಮತ್ತು ಚಾಲನಾ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು.
ಅದರಲ್ಲಿ ಇಬ್ಬರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ವೈದ್ಯರಾದ ಆರ್. ಎಸ್. ಹಿತ್ತಲಮನಿ ಹಾಗೂ ಪಿ. ಎನ್.ಬಿರಾದಾರ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ದೀಪಕ ಮತ್ತು ಕಾರ್ಮಿಕ ಕಲ್ಯಾಣಾಧಿಕಾರಿ ರಾಜೇಂದ್ರ, ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಉಪಸ್ಥಿತರಿದ್ದರು.