ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಹೋಳಿ ಹಬ್ಬಕ್ಕೆ ಬಣ್ಣ ಬಳಸದಂತೆ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಡಂಗೂರ ಹೊಡೆಸಲಾಗಿದೆ.
ಕೊರೊನಾ ವೈರಸ್ದಿಂದ ಭಯಭೀತರಾಗಿರುವ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ಬಣ್ಣ ಹಾರಿಸದಂತೆ ಡಂಗೂರ ಸಾರಿಸಿದ್ದಾರೆ. ಚೀನಿಯರು ತಯಾರಿಸುವ ಬಣ್ಣವನ್ನು ಬಳಸದಂತೆ ಪಂಚಾಯಿತಿ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಣ್ಣ ಬಳಸದಂತೆ ಬೀದಿಗಳಲ್ಲಿ ತೆರಳಿ ಗ್ರಾಮದ ಯಲ್ಲಪ್ಪಾ ಡಂಗೂರ ಸಾರಿದ್ದಾರೆ.