ETV Bharat / state

ಧಾರವಾಡ; ಕೆಲಗೇರಿ ಗ್ರಾಮದಲ್ಲಿ ಸ್ವಯಂಪ್ರೇರಿತ ಲಾಕ್​​ಡೌನ್​! - Corona in Dharwad

ಧಾರವಾಡ ಜಿಲ್ಲೆಯ ಕೆಲಗೇರಿ ಗ್ರಾಮದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ, ಗ್ರಾಮವನ್ನು ಸಂಪೂರ್ಣವಾಗಿ ಲಾಕ್​ಡೌನ್​ ಮಾಡುವಂತೆ ಸ್ವತಃ ಗ್ರಾಮಸ್ಥರೇ ನಿರ್ಧರಿಸಿದ್ದಾರೆ.

Corona appearing in the village
ಲಾಕ್​ಡೌನ್​ ಮಾಡಲು ಗ್ರಾಮಸ್ಥರ ನಿರ್ಧಾರ
author img

By

Published : Jul 10, 2020, 11:32 PM IST

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ದಿನೇ‌ ದಿನೆ ಹೆಚ್ಚಾಗುತ್ತಿದ್ದು, ‌ಜಿಲ್ಲೆಯ ಕೆಲಗೇರಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮವನ್ನು ಲಾಕ್​ಡೌನ್​​ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.

ಲಾಕ್​ಡೌನ್​ ಮಾಡಲು ಗ್ರಾಮಸ್ಥರ ನಿರ್ಧಾರ

ಧಾರವಾಡದ ಕೆಲಗೇರಿ ಗ್ರಾಮದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಕೇಸ್ ಗಳು ದೃಢಪಟ್ಟ ಹಿನ್ನೆಲೆ, ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ನಿನ್ನೆ ರಾತ್ರಿ ಗ್ರಾಮಸ್ಥರೆಲ್ಲ ಒಂದೆಡೆ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಲಾಕ್​ಡೌನ್​ ಬಗ್ಗೆಯೂ​ ತಿಳಿಸಿ ಹೇಳಿದ್ದಾರೆ.

ಅನಗತ್ಯವಾಗಿ ಯಾರೂ ಮನೆಯಿಂದ ಹೊರಬರಬೇಡಿ, ಮದುವೆ ಸೇರಿದಂತೆ ದೊಡ್ಡ ಸಭೆ ಸಮಾರಂಭಗಳಿಗೆ ಹೋಗಬೇಡಿ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ರೋಗದ ವಿರುದ್ದ ಹೋರಾಡಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.